SSLC : ಈ ಬಾರಿಯ SSLC ಯಲ್ಲಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳಿಗೆ ನೋಟಿಸ್ ಕೊಡಬೇಕೆಂದು CM ಸಿದ್ಧರಾಮಯ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿನೆ ನೀಡಿದ್ದಾರೆ. ಮುಂದಿನ ಬಾರಿಯ ಫಲಿತಾಂಶ ಉತ್ತಮಗೊಳ್ಳಬೇಕೆಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓ ಗೆ ಗಳಿಗೆ CM ಖಡಕ್ ಸೂಚನೆ ನೀಡಿದ್ದಾರೆ.
ಯಾವುದೇ ನೆಪ ಹೇಳದೆ ಡಿಡಿಪಿಐ ಗಳು ಆಗಾಗ ತಮ್ಮ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಒಅರಿಸ್ಥಿತಿಗಳಂಜು ಗಮನಿಸಬೇಕು ಆಗ ಅಲ್ಲಿ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದು ಸಿದ್ಧರಾಮಯ್ಯ ಸಲಹೆ ನೀಡಿದ್ದು, ಎಲ್ಲ ರೀತಿಯ ಸವಲತ್ತು ಗಳನ್ನು ನೀಡಿಯು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದ್ದು, ಪೋಷಕರ ಹಾಗೂ ಶಿಕ್ಷಕರ ಸಂಬಂಧವನ್ನು ಬಲಗೊಳಿಸುವಲ್ಲಿ ತಾವೆಲ್ಲರೂ ಶ್ರಮ ವಹಿಸಿ ಎಂದಿದ್ದಾರೆ.
ಡಿಡಿಪಿಐ ಗಳು ಕುಳಿತು ಕೆಲಸ ಮಾಡುವ ಬದಲು ಇಡೀ ಜಿಲ್ಲೆಯ ಪ್ರಯಾಣ ಮಾಡಿ ಇದರಿಂದ ನಿಗಾ ವಹಿಸಲು ಸಹಾಯವಾಗುತ್ತದೆ ಹಾಗೂ ಕಲ್ಯಾಣ ಕರ್ನಾಟಕ ದ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಭೆಯಲ್ಲಿ CM ಸಿದ್ಧರಾಮಯ್ಯ ತಿಳಿಸಿದ್ದಾರೆ.
