Home » Vittla: ವಿಟ್ಲ: ಫೇಸ್ ಬುಕ್‌’ನಲ್ಲಿ ಕೋಮು ದ್ವೇಷ ಸಂದೇಶ ರವಾನೆ: ಪ್ರಕರಣ ದಾಖಲು

Vittla: ವಿಟ್ಲ: ಫೇಸ್ ಬುಕ್‌’ನಲ್ಲಿ ಕೋಮು ದ್ವೇಷ ಸಂದೇಶ ರವಾನೆ: ಪ್ರಕರಣ ದಾಖಲು

0 comments

Vittla: ಫೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಪೋಸ್ಟ್ ಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಯತೀಶ್ ಪೆರುವಾಯಿ ಎಂಬಾತನ ವಿರುದ್ಧ ಪ್ರಕರಣ F.I.R. ದಾಖಲಾಗಿದೆ.

ಪೆರುವಾಯಿ ಗ್ರಾಮದ ನಿವಾಸಿ ಯತೀಶ ಎಂಬಾತನು “ಯತೀಶ್ ಪೆರುವಾಯಿ” ಎಂಬ ಹೆಸರಿನ ಪೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ 3 ಪೋಸ್ಟ್ ಗಳನ್ನು ಪ್ರಸಾರ ಮಾಡಿರುವುದಾಗಿದೆ. ಸದ್ರಿ ಪೋಸ್ಟ್ ಗಳಿಂದಾಗಿ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ವಿಟ್ಲ (vittla)ಪೊಲೀಸ್ ಠಾಣೆಯಲ್ಲಿ ದಿನಾಂಕ:31-05-2025 ರಂದು ಅ. ಕ್ರ 72/2025 ಕಲಾಂ 353(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

You may also like