Home » Crime: ಶಿವಣ್ಣ ಗಣೇಶ್ ಸಿನಿಮಾ ನಿರ್ಮಿಸುವುದಾಗಿ ಮಹಿಳೆಗೆ ವಂಚನೆ: ನಿರ್ಮಾಪಕನ ವಿರುದ್ಧ ದೂರು ದಾಖಲು!

Crime: ಶಿವಣ್ಣ ಗಣೇಶ್ ಸಿನಿಮಾ ನಿರ್ಮಿಸುವುದಾಗಿ ಮಹಿಳೆಗೆ ವಂಚನೆ: ನಿರ್ಮಾಪಕನ ವಿರುದ್ಧ ದೂರು ದಾಖಲು!

0 comments

Crime: ನಟ ಶಿವರಾಜ್ ಕುಮಾ‌ರ್ ಹಾಗೂ ನಟ ಗಣೇಶ್ ಅವರ ಸಿನಿಮಾ ನಿರ್ಮಿಸುವುದಾಗಿ ಹೇಳಿ ನನಗೆ ನಿರ್ಮಾಪಕ ಸೂರಪ್ಪ ಬಾಬು ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

2022 ರಲ್ಲಿ ನನಗೆ ಸೂರಪ್ಪ ಬಾಬು ಪರಿಚಯವಾಯ್ತು. ನಾನು ನಟ ಶಿವಣ್ಣ ಹಾಗೂ ಗಣೇಶ್ ನಾಯಕ ನಟರಾಗಿ ನಟಿಸುತ್ತಿದ್ದಾರೆಂದು ನಂಬಿಸಿ ನನ್ನಿಂದ 92 ಲಕ್ಷ ರೂ. ಹಣ ಪಡೆದರು. ಬಳಿಕ ವಿಚಾರಿಸಿದಾಗ ಅವರು ಸಿನಿಮಾ ಮಾಡುತ್ತಿಲ್ಲವೆಂದು ಗೊತ್ತಾಯಿತು. ಹಣ ಕೇಳಿದ್ದಕ್ಕೆ 25 ಲಕ್ಷ ರೂ. ವಾಪಸ್ ನೀಡಿ, ಮಿಕ್ಕ ಹಣ ನೀಡದೇ ಬೆದರಿಕೆ ಒಡ್ಡುತ್ತಿದ್ದಾರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.

You may also like