Dakshina Kannada: ಬಸ್ಸಿಗೆ ಕೈ ಸನ್ನೆ ಮಾಡಿ ವ್ಯಕ್ತಿಯೊಬ್ಬ ಬಸ್ಸು ನಿಲ್ಲಿಸಿ ಗಾಜಿಗೆ ಕ್ಲಲೆಸೆದು ಪರಾರಿಯಾಗಿರುವ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಬಂಗೇರಕಟ್ಟೆ-ಕಲ್ಲಗುಡ್ಡೆ ಎಂಬಲ್ಲಿ ಮೇ 30 ರಂದು ನಡೆದಿರುವ ಕುರಿತು ವರದಿಯಾಗಿದೆ.
ಬಸ್ಸು ಚಾಲಕ ಬಂದಾರು ಗ್ರಾಮದ ಮೈರೋಳ್ತಡ್ಕ -ಕೋಡಿ ನೆಕ್ಕಿಲು ನಿವಾಸಿ ಸತೀಶ್ (40) ಇವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರನ್ನು ನೀಡಿದ್ದು, ಚೇತನ್ ಬಂದಾರು ಎಂಬುವವರ ಮಾಲಕತ್ವದ ಕೆ.ಎ.19 ಎ.ಡಿ.9221 ನೋಂದಣಿ ಸಂಖ್ಯೆಯ ಶಿವಕೃಪಾ ಬಸ್ಸು ಮೇ 30 ರಂದು ಸಂಜೆ ಉಪ್ಪಿನಂಗಡಿಯಿಂದ ಪ್ರಯಾಣಿಕರನ್ನು ಕರೆದುಕೊಂಡು ಮಡಂತ್ಯಾರು ಕಡೆಗೆ ಹೋಗಿದ್ದು, ಬಂಗೇರಕಟ್ಟೆ ಕಲ್ಲಗುಡ್ಡೆ ಎಂಬಲ್ಲಿಗೆ ತಲುಪಿದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ರಸ್ತೆಯ ಬಲ ಬದಿಯಲ್ಲಿ ರೈನ್ ಕೋಟ್ ಧರಿಸಿಕೊಂಡು ಬಂದವನು ಬಸ್ಸು ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಬಸ್ಸು ನಿಲ್ಲಿಸಿಲಾಗಿದೆ.
ಆ ಅಪರಿಚಿತ ವ್ಯಕ್ತಿ ಬಸ್ಸಿನ ಮುಂಭಾಗಕ್ಕೆ ಬಂದು ಆತನ ಕೈಯಲ್ಲಿದ್ದ ಮುಷ್ಠಿ ಗಾತ್ರದ ಕಲ್ಲನ್ನು ಬಸ್ಸಿನ ಮುಂಭಾಗದ ಗಾಜಿಗೆ ಬಿಸಾಡಿಕಲ್ಲಗುಡ್ಡೆ ಕಡೆಗೆ ಓಡಿ ಹೋಗಿರುವುದಾಗಿ ವರದಿಯಾಗಿದೆ. ಆತನ ಕೃತ್ಯದಿಂದ ಬಸ್ಸಿನ ಗಾಜು ಒಡೆದಿರುವುದರಿಂದ ಸುಮಾರು 40 ಸಾವಿರ ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
