Home » Mangaluru : ಹತ್ಯೆಗೀಡಾದ ರಹಿಮಾನ್‌ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ನೀಡಿದ ಹಿಂದೂ ಮುಖಂಡರು

Mangaluru : ಹತ್ಯೆಗೀಡಾದ ರಹಿಮಾನ್‌ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ನೀಡಿದ ಹಿಂದೂ ಮುಖಂಡರು

0 comments

Mangaluru : ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ ಬಂಟ್ವಾಳದ(Bantwal) ಅಬ್ದುಲ್‌ ರಹಿಮಾನ್‌ (Abdul Rahiman) ಬರ್ಬರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಇದನ್ನೆಲ್ಲ ರೆಹೀಮಾನ್ ಮನೆಗೆ ಹಿಂದೂ ಮುಖಂಡರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ನೀಡಿದ್ದಾರೆ.

ಹೌದು, ಬಡಗಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ಆಳ್ವ ಗುಂಡಾಲ ನೇತೃತ್ವದ ನಿಯೋಗದಲ್ಲಿದ್ದ ಮುಖಂಡರು ಹತ್ಯೆಗೀಡಾದ ರಹ್ಮಾನ್‌ರ ತಂದೆ ಅಬ್ದುಲ್ ಖಾದರ್, ಸಹೋದರ ಹನೀಫ್ ಮತ್ತಿತರರನ್ನು ಭೇಟಿ ಮಾಡಿ “ರಹ್ಮಾನ್ ತುಂಬಾ ಪಾಪದ ಹುಡುಗ. ಇಂತಹ ಘಟನೆ ಆಗಬಾರದಿತ್ತು” ಎಂದು ಈ ಸ್ಥಳೀಯ ಹೇಳಿ ರಹ್ಮಾನ್ ಹತ್ಯೆ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಅಂದಹಾಗೆ ಸ್ಥಳೀಯ ಪ್ರಮುಖರಾದ ಬಾಬಣ್ಣ ನಡ್ಯೋಡಿ, ಮೋಹನ್ ಶೆಟ್ಟಿ ನಡ್ಯೋಡಿ, ಶಾಕೇತ್ ಭಂಡಾರಿ ಪರಕೂರು, ಕೃಷ್ಣ ಶೆಟ್ಟಿ ಗುಂಡಾಲ, ದೇವಪ್ಪ ಪೂಜಾರಿ ಬಾಳಿಕೆ ಸಹಿತ ಸುಮಾರು 25ಕ್ಕೂ ಅಧಿಕ ಮಂದಿ ನಿಯೋಗದಲ್ಲಿದ್ದರು.

You may also like