Home » Bengaluru : ‘ಕಾಲಿಗೆ ಬಿದ್ದರೂ ಪರ್ವಾಗಿಲ್ಲ, ಕೇಸ್ ವಾಪಸ್ ತಗೋಳಲ್ಲ’ – ಹಲ್ಲೆಗೊಳಗಾದ ಆಟೋ ಡ್ರೈವರ್ ಹೇಳಿಕೆ

Bengaluru : ‘ಕಾಲಿಗೆ ಬಿದ್ದರೂ ಪರ್ವಾಗಿಲ್ಲ, ಕೇಸ್ ವಾಪಸ್ ತಗೋಳಲ್ಲ’ – ಹಲ್ಲೆಗೊಳಗಾದ ಆಟೋ ಡ್ರೈವರ್ ಹೇಳಿಕೆ

0 comments

Bengaluru : ಆಟೋರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ದರ್ಪ ತೋರಿದ್ದ ಯುವತಿಯು ಪೊಲೀಸ್ ನೋಟಿಸ್ ಬಳಿಕ ರವಿವಾರ ಬೆಳ್ಳಂದೂರು ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತಪ್ಪೊಪ್ಪಿಕೊಂಡಿದ್ದಳು. ಅಲ್ಲದೆ ಈ ಯುವತಿ ಆಟೊ ಚಾಲಕನ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚನೆ ಕೂಡ ಮಾಡಿದ್ದಳು. ಆದರೆ ಇದೀಗ ಹಲ್ಲೆಗೊಳಗಾದ ಆಟೋ ಚಾಲಕ ‘ಆಕೆ ಕಾಲಿಗೆ ಬಿದ್ದರೂ ಪರವಾಗಿಲ್ಲ ಕೇಸ್ ವಾಪಸ್ ತಗೊಳಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಅವರು, ಚಪ್ಪಲಿಯಿಂದ ಹೊಡೆದಾಗ ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ. ಘಟನೆ ನಡೆದ ಬಳಿಕ ನಾನು ಎರಡು ದಿನ ಮನೆಯವರ ಜೊತೆ ಮಾತನಾಡಿಲ್ಲ. ಮುಖ ತೋರಿಸಲು ಆಗುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದು ತಿಳಿಸಿದ್ದಾರೆ.

You may also like