Udupi: ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟ ಕಾಮಿಡಿ ಕಿಲಾಡಿಯ ಮೂಲಕ ಜನಮನ್ನಣೆ ಗಳಿಸಿದ್ದ ರಾಕೇಶ್ ಪೂಜಾರಿ, ಮನೆಗೆ ಇಂದು ರಿಷಬ್ ಶೆಟ್ಟಿ ಅವರ ಪತ್ನಿ ಜೊತೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ರಾಕೇಶ್ ಪೂಜಾರಿ ಕಿರುತೆರೆ ಮಾತ್ರವಲ್ಲ ಕನ್ನಡ ಸಿನಿರಂಗದಲ್ಲೂ ಕೂಡ ಒಂದಿಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಅದ್ರಲ್ಲೂ ಪ್ರೇಕ್ಷರು ಕಾತುರದಿಂದ ಕಾದಿರುವ ಕಾಂತಾರ ಚಾಪ್ಟರ್ 1ರಲ್ಲಿ ಕೂಡ ರಾಕೇಶ್ ಒಂದು ಮಹತ್ವದ ಪಾತ್ರವನ್ನು ನಿಭಾಯಿಸಿದ್ದಾರೆ. ರಾಕೇಶ್ ಅವರ ಕೊನೆಯ ಸಿನಿಮಾ ಕಾಂತಾರ ಅಂತ ಹೇಳಿದ್ರು ತಪ್ಪಾಗಲ್ಲ.
ಕಾಂತಾರ ಸಿನಿಮಾಗಾಗಿ ಸಾಕಷ್ಟು ಸಿನಿಮಾಗಳನ್ನು ರಾಕೇಶ್ ಕೈಬಿಟ್ಟಿದ್ದರು. ಆದ್ರೆ ಅವರ ಅಂತಿಮ ದರ್ಶನಕ್ಕೆ ರಿಷಿಬ್ ಶೆಟ್ಟಿ ಬಂದಿಲ್ಲ ಎಂಬ ವಿಚಾರ ತುಂಬಾನೆ ಸೌಂಡ್ ಮಾಡಿತ್ತು ಮತ್ತು ಎಲ್ಲೆಡೆ ಚರ್ಚೆ ಕೂಡ ಆಗಿತ್ತು, ಒಂದಿಷ್ಟು ಜನ ರಿಷಬ್ ಅವರ ಈ ನೆಡೆಗೆ ಬೇಸರನ್ನು ಕೂಡ ವ್ಯಕ್ತ ಪಡಿಸಿದ್ದರು.
ಆದ್ರೆ ರಾಕೇಶ್ ಅವರ ನಿಧನವಾಗಿ 21 ದಿನಗಳ ಬಳಿಕ ಉಡುಪಿಯ ಹೂಡೆಯಲ್ಲಿರುವ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
