Lion Attack: ಉದ್ಯಮಿಯೊಬ್ಬರು ತಮ್ಮ ಪತ್ನಿಯ ಜೊತೆಗೆ ನಮಿಬಿಯಾಗೆ ಪ್ರವಾಸಕ್ಕೆಂದು ಹೋದಾಗ ಸಿಂಹವೊಂದು ದಾಳಿ ನಡೆಸಿದೆ. ತಾವು ಸ್ಟೇ ಆಗಿದ್ದ ಲಾಡ್ಜ್ ನಲ್ಲಿ ಶೌಚಾಲಯದಲ್ಲಿ ಕುಳಿತಿರುವಾಗ ಉದ್ಯಮಿಯನ್ನು ಸಿಂಹವೊಂದು ಎಳೆದುಕೊಂಡು ಹೋಗಿ ಕೊಂದಿರುವ ಘಟನೆಯೊಂದು ನಡೆದಿದೆ.
ಮೃತರನ್ನು ಬರ್ನ್ಡ್ ಕೆಬೆಲ್ ಎಂದು ಗುರುತಿಸಲಾಗಿದ್ದು, ನಮೀಬಿಯಾದ ಸೆಸ್‌ಫಾಂಟೈನ್ ಪ್ರದೇಶದ ಹೋನಿಬ್ ಸ್ಕೆಲಿಟನ್ ಕೋಸ್ಟ್ ಕ್ಯಾಂಪ್ ಬಳಿ ಬರ್ನ್ಡ್ ಕೆಬೆಲ್ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ರಜೆಯಲ್ಲಿದ್ದಾಗ ಈ ಘಟನೆ ನಡೆದಿರುವಂತದ್ದು.
ಇನ್ನೂ ಪರಿಸರ ಸಚಿವಾಲಯದ ವಕ್ತಾರ ನ್ಡೆಶಿಪಂಡಾ ಹಮುನ್ಯೆಲಾ ಅವರ ಹೇಳಿಕೆಯ ಪ್ರಕಾರ, ಕೆಬೆಲ್ ಶೌಚಾಲಯ ಬಳಸಲು ತಮ್ಮ ಡೇರೆಯಿಂದ ಹೊರಬಂದಾಗ ಸಿಂಹವು ಹೊಂಚು ಹಾಕಿ ದಾಳಿ ಮಾಡಿದ್ದು, ಅವರು ಡೇರೆಯಿಂದ ಹೊರಬಂದ ತಕ್ಷಣವೇ ಸಿಂಹ ಅವರ ಮೇಲೆ ಎರಗಿದೆ. ಇತರ ಶಿಬಿರಾರ್ಥಿಗಳು ಆ ಪ್ರಾಣಿಯನ್ನು ಓಡಿಸುವ ಹೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ. ಇನ್ನೂ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ ದಾಳಿಗೆ ಕಾರಣವಾದ ಪ್ರಾಣಿಯನ್ನು ಭಾನುವಾರ ಜೂನ್ 1ರಂದು ಕೊಲ್ಲಲಾಯಿತು ಎಂದು ಹೇಳಿದ್ದಾರೆ.
