7
Sharmista Panoli: ಮಂಗಳವಾರ ಕಲ್ಕತ್ತಾ ಹೈ ಕೋರ್ಟ್ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತ ಪನೊಲಿ ಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದು, ವಾಕ್ ಸ್ವಾತಂತ್ರ್ಯ ಎಂದರೆ ಧಾರ್ಮಿಕ ನಂಬಿಕೆಗಳ ಕುರಿತಾಗಿ ಅಗೌರವದಿಂದ ಮಾತಾನಾಡುವುದಲ್ಲ ಎಂದು ಬುದ್ಧಿ ಮಾತು ಹೇಳಿದೆ.
ಇನ್ನೂ ಆಪರೇಷನ್ ಸಿಂಧೂರ್ ಕುರಿತಾಗ ಫೇಸ್ಬುಕ್ ನ ಒಂದು ಪೋಸ್ಟ್ ಗೆ ನಿಂದನಾತ್ಮಕ ಕಾಮೆಂಟ್ ಹಾಕಿದ್ದಂತಹ 22 ವರ್ಷದ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತ ಕ್ಷಮೆ ಕೇಳಿದ್ದಾರೆ.
ನಮ್ಮ ದೇಶದ ಒಂದು ಭಾಗದ ಜನರಿಗೆ ನೀವು ನೋವುಂಟು ಮಾಡಿದ್ದೀರಿ. ನಿಮಗೆ ವಾಕ್ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಬೇರೆಯವರ ಭಾವನೆಗಳ ಬಗೆಗೆ ಹೀಯಾಳಿಸಿ ಮಾತನಾಡಲು ಸ್ವಾತಂತ್ರ್ಯ ಇರುವುದಿಲ್ಲ. ನಮ್ಮದು ವೈವಿಧ್ಯತೆ ತುಂಬಿರುವ ದೇಶ ಎಂದು ಕೋರ್ಟ್ ಹೇಳಿದೆ.
