6
Kamal Haasan: ಇತ್ತೀಚೆಗೆ ಕನ್ನಡದ ಕುರಿತಾಗಿ ಕಮಲ್ ಹಾಸನ್ ನೀಡಿರುವ ಹೇಳಿಕೆ ಬಾರಿ ವಿವಾದಕ್ಕೆ ಅಣಿ ಮಾಡಿಕೊಟ್ಟಿದ್ದು, ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳದೆ ದರ್ಪ ತೋರಿದ್ದಾರೆ.
ಇದೀಗ ತಮ್ಮ ಸಿನಿಮಾಗೆ ಭದ್ರತೆ ಕೋರಿ ಕಮಲ್ ಹಾಸನ್ ಹೈ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಕಮಲ್ ಗೆ ಬಾರಿ ಕ್ಲಾಸ್ ತೆಗೆದುಕೊಂಡಿದೆ. ಒಂದು ರಾಜ್ಯಕ್ಕೆ ಸಂಬಂಧಪಟ್ಟ ಭಾಷೆಯ ಮೇಲೆ ಆ ರಾಜ್ಯದವರಿಗೆ ಅಪಾರ ಪ್ರೀತಿ ಗೌರವ ಇರುತ್ತದೆ. ಅಂತಹ ಭಾಷೆಯನ್ನು ಅಲ್ಲಗಳೆದು, ಕ್ಷಮೆ ಕೂಡ ಕೇಳದೆ ಕೋರ್ಟ್ ಮೆಟ್ಟಿಲೇರಿದ್ದೀರಿ ಅಲ್ಲವೇ ಎಂದು ಕೋರ್ಟ್ ಪ್ರಶ್ನಿಸಿದೆ.
ಅವಿವೇಕದ ಮಾತುಗಳನ್ನು ಆಡಿರುವ ಕಮಲ್ ಹಾಸನ್ ರವರ ಅಹಂಕಾರವನ್ನು ಇಳಿಸಬೇಕು ಹಾಗೂ ಅವರು ಇನ್ನು ಮುಂದೆ ಕರ್ನಾಟಕಕ್ಕೆ ಬರಬಾರದೆಂದು ತೀರ್ಮಾನ ಮಾಡಿದ್ದೇವೆಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾರ್ನಿಂಗ್ ಕೊಟ್ಟಿದ್ದಾರೆ.
