7
RBC: ಆರ್ ಸಿಬಿ (RBC) ಫೈನಲ್ ನಲ್ಲಿ ಗೆದ್ದು ಐಪಿಎಲ್ ಚಾಂಪಿಯನ್ ಪಟ್ಟವೇರಿದ ಹಿನ್ನೆಲೆ ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯ ಸಂದರ್ಭ ನಡೆದ ದುರಂತದಲ್ಲಿ ಹೆಬ್ರಿ ಮೂಲದ ಯುವತಿಯೋರ್ವಳು ಸಾವನ್ನಪ್ಪಿದ್ದಾಳೆ.
ಬೆಂಗಳೂರು ತಿಪ್ಪಸಂದ್ರ ನಿವಾಸಿಗಳಾದ ಹೆಬ್ರಿ ಮೂಲದ ಕರುಣಾಕರ ಶೆಟ್ಟಿ ಮತ್ತು ಉಪ್ಪಿನಂಗಡಿ ಪೂಜಾ ಶೆಟ್ಟಿ ಯವರ ಪುತ್ರಿ ಕು. ಚಿನ್ಮಯಿ ಶೆಟ್ಟಿ (19) ಮೃತ ದುರ್ದೈವಿ.
ಕು. ಚಿನ್ಮಯಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಆರ್‌ಸಿಬಿ ತಂಡದ ವಿಜಯ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಆಕೆ ಪ್ರಾಣ ಕಳೆದುಕೊಂಡಿದ್ದಾರೆ.
