Home remedies: ಕೂದಲು ಅತಿ ಬೇಗನೆ ಬೆಳ್ಳಗಾಗುವುದು ಇಂದು ಬಹುತೇಕರ ಸಮಸ್ಯೆಯಾಗಿದ್ದು, ಹಿರಿಯ ವಯಸ್ಕರಲ್ಲದೆ ಚಿಕ್ಕ ಮಕ್ಕಳಿಗೂ ಕೂಡ ಈ ಬಾಧೆ ಕಾಡುತ್ತಿದೆ.
ಇನ್ನೂ ಕೂದಲು ಕಪ್ಪಾಗಿರೋಕೆ ಮೆಲನಿನ್ ಎಂಬ ವರ್ಣದ್ರವ್ಯ ಕಾರಣವಾಗಿದ್ದು, ದೇಹದಲ್ಲಿ ಇದರ ಉತ್ಪಾದನೆ ಕಡಿಮೆಯಾದಾಗ ಈ ರೀತಿಯ ಸಮಸ್ಯೆಗಳು ಹುಟ್ಟುಕೊಳ್ಳುತ್ತವೆ.
ಹೇರ್ ಮಾಸ್ಕ್ ಧರಿಸುವುದರಿಂದ ಕೂದಲು ಬೆಳ್ಳಗಾಗುವುದನ್ನು ತೊಡೆದುಹಾಕಬಹುದಾಗಿದ್ದು, ಟೊಮೊಟೊ ಹಾಗೂ ಮೊಸರಿನ ಹೇರ್ ಮಾಸ್ಕ್ ಉಪಯೋಗಕಾರಿಯಾಗಿದೆ. ಟೊಮೊಟೊ ನೆಟ್ಟಿಯಲ್ಲಿನ ಕೊಳೆಯನ್ನು ತೆಗೆದು ಹಾಕಿ ಕೂದಲುಗಳ ಬೇರುಗಳು ಬಲಗೊಳ್ಳಲು ಸಹಕಾರಿಯಾಗಿದೆ.
ಇನ್ನೂ ಮೊಸರು ಒಂದು ನೈಸರ್ಗಿಕ ಕಂಡೀಶನರ್ ಆಗಿದ್ದು, ಇದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗಿ, ಕೂದಲು ಗಟ್ಟಿಯಾಗುತ್ತದೆ ಹಾಗೂ ಬಿಳಿ ಕೂದಲು ಕಮ್ಮಿಯಾಗುತ್ತದೆ. ಈ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಬಿಳಿ ಕೂದಲು ಕಡಿಮೆಯಾಗುತ್ತದೆ.
