Home » Bengaluru Stampede: – ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಆಗಿರಲಿಲ್ಲ – ಗೃಹಸಚಿವ ಪರಮೇಶ್ವರ್ 

Bengaluru Stampede: – ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಆಗಿರಲಿಲ್ಲ – ಗೃಹಸಚಿವ ಪರಮೇಶ್ವರ್ 

0 comments

Bengaluru Stampede: ಬೆಂಗಳೂರಿನಲ್ಲಿ ನಡೆದ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಆಗಿರಲಿಲ್ಲ ಎಂದು ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದು, ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಪ್ರಕರಣ ಸಂಬಂಧ ಎಫ್‌ಐಆರ್ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲ್ಲ ಎಂದ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. 56 ಜನರಿಗೆ ಗಾಯಗಳಾಗಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ 46 ಮಂದಿ ಚಿಕಿತ್ಸೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮುಂದೆ ದೊಡ್ಡ ಸಮಾರಂಭ ಮಾಡಬೇಕಿದ್ರೆ ಪೊಲೀಸ್ ಇಲಾಖೆ ನಿಯಮದಂತೆ ಮಾಡಬೇಕು. ಹೀಗಾಗಿ SOPಯನ್ನ ಮಾಡ್ತೇವೆ ಎಂದು ತಿಳಿಸಿದರು.

ನಿನ್ನೆ ದುರ್ಘಟನೆಯಲ್ಲಿ ಸತ್ತವರು ಎಲ್ಲರೂ ಯುವಕರೇ. ಅವರ ಜೀವ ಹೋಗಿ ಆಗಿದೆ. ಈ ಘಟನೆಗೆ ಯಾರೂ ಕಾರಣರೂ ಅವರ ಮೇಲೆ ಕಠಿಣ ಕ್ರಮ ಜರಗಿಸುತ್ತೇವೆ ಎಂದ ಗೃಹ ಸಚಿವರು, ಆರ್ಸಿಬಿ ವಿನ್ ಆದ ನೆಪದಲ್ಲಿ ರಾತ್ರಿಯೆಲ್ಲಾ ಸೆಲೆಬ್ರೇಷನ್ ಮಾಡಿದ್ರು. ಬೆಳಿಗ್ಗೆ ನಂತರ ಈ ಕಾರ್ಯಕ್ರಮ ಆರಂಭವಾಯ್ತು. ಚಿನ್ನಸ್ವಾಮಿ ಕ್ರೀಡಾಂಗಣ 35 ಸಾವಿರ ಜನ ಕೆಪಾಸಿಟಿ ಇರುವ ಗ್ರೌಂಡ್. ಆದರೆ ಆ ಕ್ಷಣದಲ್ಲಿ ಅಲ್ಲಿಗೆ ಬರೋಬ್ಬರಿ ಮೂರು ಲಕ್ಷ ಜನ ಬಂದಿದ್ದಾರೆ ಎಂದು ಹೇಳಿದರು.

ಇನ್ನು, ಮೆಟ್ರೋ ಮಾಹಿತಿ ಪ್ರಕಾರ ರಾತ್ರಿ‌ 8 ಗಂಟೆಯಿಂದ 9 ವರೆಗೆ ಬರೋಬ್ಬರಿ 8 ಲಕ್ಷ ಜನ ಓಡಾಡಿದ್ದಾರೆ. ಇದು ಮೆಟ್ರೋ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಓಡಾಟ. ಆದರೆ ವಿಧಾನ ಸೌಧದಲ್ಲಿ ಪುಣ್ಯಕ್ಕೆ ಅಂತ ಯಾವುದೇ ಅಹಿತಕರ ಘಟನೆ ಆಗಿಲ್ಲ. ಈ ಪ್ರಕರಣ ಸಂಬಂಧ ಎಫ್‌ಐಆರ್ ಆಗಿಲ್ಲ, ಈ ಬಗ್ಗೆ ಅಧಿಕಾರಿಗಳೊಡನೆ ಮಾತಾಡ್ತೇನೆ ಎಂದರು.

You may also like