Home » Elephant Attack: ಜಮೀನಿನ ಶೆಡ್‌ನಲ್ಲಿ ಮಲಗಿದ್ದವರ ಮೆಲೆ ಕಾಡಾನೆ ದಾಳಿ – ರೈತ ಪ್ರಾಣಪಾಯದಿಂದ ಪಾರು

Elephant Attack: ಜಮೀನಿನ ಶೆಡ್‌ನಲ್ಲಿ ಮಲಗಿದ್ದವರ ಮೆಲೆ ಕಾಡಾನೆ ದಾಳಿ – ರೈತ ಪ್ರಾಣಪಾಯದಿಂದ ಪಾರು

0 comments

Elephant Attack: ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಜಮೀನಿನ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ ಬೆಳ್ಳಪ್ಪ ಶೆಡ್ನಲ್ಲಿ ಮಲಗಿದ್ದಾಗ ಕಾಡಾನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಮಲಗಿದ್ದ ಇಬ್ಬರು ಪ್ರಾಣಪಾಯದಿಂದ ಪಾರಗಿದ್ದಾರೆ. ಶೆಡ್ ಅನ್ನು ಧ್ವಂಸಗೊಳಿಸಿ ಸಂಗ್ರಹಿಸಿಟ್ಟಿದ್ದ ತರಕಾರಿ ಹಾಗೂ ಮನೆ ಸಾಮಾನನ್ನು ತಿಂದು ಹಾಕಿ ಆನೆ ತನ್ನ ಪಾಡಿಗೆ ತಾನು ಹೋಗಿದೆ. ಮಲಗಿದ್ದ ರೈತರಿಗೆ ಯಾವುದೇ ಹಾನಿ ಮಾಡಿಲ್ಲ.

ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಸಹ ಕಾಡಾನೆಗಳು ನಾಶಪಡಿಸಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಹಂಗಳ ಮಾಧು ಕಾಡಾನೆಗಳ ಹಾವಳಿ ಹೆಚ್ಚಿದ್ದು ಅರಣ್ಯ ಇಲಾಖೆ ಕಾಡಾನೆಗಳ ನಿಯಂತ್ರಿಸಬೇಕು ಜೊತೆಗೆ ಶೆಡದ ಧ್ವಂಸಗೊಳಿಸಿದ್ದು ಸೂಕ್ತ ಪರಿಹಾರ ನೀಡಬೇಕು, ರೈತನ ಬಾಲೆ ಬೆಳೆಯನ್ನು ಸಹ ಕಾಡಾನೆಗಳು ನಾಶಪಡಿಸಿವೆ ಎಂದರು.

You may also like