2
RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಂತಹ ದುರಂತ ಈಗಾಗಲೇ ಸಂಭ್ರಮೋತ್ಸವವನ್ನು ಮರೆಸಿದ್ದು, ನೊಂದ ಕುಟುಂಬಗಳು ಕಣ್ಣೀರಿಡುತ್ತಿವೆ. ಇದೀಗ ಮೃತರ ಕುಟುಂಬಗಳಿಗೆ RCB ವತಿಯಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೂ 10 ಲಕ್ಷ ಘೋಷಣೆ ಮಾಡಿದ್ದು, ಗಾಯಗೊಂಡವರ ಸಂಪೂರ್ಣ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸುತ್ತಿವೆ. ಇದರ ನಂತರ ಕೆಎಸ್ ಸಿಎ ಕೂಡ ಮೃತರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದೆ.
ಅಭಿಮಾನಿಗಳ ಕಷ್ಟಕ್ಕೆ ಮರುಗಿದ RCB ಪ್ರಾಂಚೈಸಿ ಕೂಡ ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ನೀಡಲು ಮುಂದಾಗಿದೆ. ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಆರ್ ಸಿಬಿ ಕೇರ್ ನಿಧಿಯನ್ನು ರಚನೆ ಮಾಡಿ ಸಹಾಯ ಮಾಡುತ್ತಿದೆ.
