Home » Dharmasthala: ಧರ್ಮಸ್ಥಳ: ಬೊಳಿಯಾರ್‌ನಲ್ಲಿ ಕಾಡಾನೆ ದಾಳಿಗೆ ರಿಕ್ಷಾ ಜಖಂ: ಚಾಲಕ ಪಾರು!

Dharmasthala: ಧರ್ಮಸ್ಥಳ: ಬೊಳಿಯಾರ್‌ನಲ್ಲಿ ಕಾಡಾನೆ ದಾಳಿಗೆ ರಿಕ್ಷಾ ಜಖಂ: ಚಾಲಕ ಪಾರು!

0 comments

Dharmasthala: ಧರ್ಮಸ್ಥಳದ (Dharmasthala) ಬೊಳಿಯಾ‌ರ್ ಎಂಬಲ್ಲಿ ಕಾಡಾನೆಯೊಂದು ದಾಳಿ ಮಾಡಿದ ಹಿನ್ನಲೆಯಲ್ಲಿ ಆಟೋರಿಕ್ಷಾವೊಂದು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.

ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಗಳ ಹಿಂಡು ರಸ್ತೆ ಮಧ್ಯೆ ಎದುರಾಗಿದ್ದು ದಿನೇಶ್ ಇದನ್ನು ಗಮನಿಸಿ ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ದೂರದಲ್ಲಿ ಅಡಗಿ ನಿಂತರು.

ಈ ವೇಳೆ ಗುಂಪಿನಲ್ಲಿದ್ದ ದೊಡ್ಡ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ.

You may also like