8
Shine Tom Chacko: ತಮಿಳುನಾಡಿನ ಧರ್ಮಪುರಿಯ ಪಾಲಕೊಟ್ಟೈ ಬಳಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಮಲಯಾಳಂ ನಟ ಶೈನ್ ಟಾಮ್ ಚಾಕೋ ಅವರು ಗಂಭೀರ ಗಾಯಗೊಂಡಿದ್ದಾರೆ. ಇಂದು (ಜೂ.06) ಬೆಳಗ್ಗೆ ನಡೆದ ಘಟನೆಯಲ್ಲಿ ಶೈನ್ ತಂದೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ನಟ ಶೈನ್ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ನಟ ಶೈನ್ ಮತ್ತು ತಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ವರದಿಯಾಗಿದೆ. ಧರ್ಮಪುರಿ ಸರಕಾರಿ ಮೆಡಿಕಲ್ ಕಾಲೇಜಿಗೆ ಇವರನ್ನು ದಾಖಲು ಮಾಡಲಾಗಿದೆ. ಅಪಘಾತದ ಸಮಯದಲ್ಲಿ ಶೈನ್ ತನ್ನ ತಾಯಿ, ಸಹೋದರ, ತಂದೆ ಮತ್ತು ಚಾಲಕನ ಜೊತೆ ಪ್ರಯಾಣ ಮಾಡುತ್ತಿದ್ದು, ಮಾಹಿತಿ ಪ್ರಕಾರ ಅವರ ಸಹೋದರ ಮತ್ತು ಕಾರು ಚಾಲಕ ಕೂಡಾ ಗಾಯಗೊಂಡಿದ್ದಾರೆ.
