4
Mithi River Scam: ಇದೀಗ ಬಾಲಿವುಡ್ ನಟ ಡಿನೋ ಮೋರಿಯಾ ಮತ್ತೊಮ್ಮೆ ತನಿಖಾಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಇವರ ಮನೆ ಮೇಲೆ ಇ ಡಿ ದಾಳಿ ಆಗಿದೆ.
ಮಿಥಿ ನದಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ದಾಳಿ ನಡೆದಿದ್ದು, ಇದು ರಾಜ್ಯದ ನದಿಗಳ ಶುದ್ಧೀಕರಣ ಹೆಸರಿನಲ್ಲಿ 65 ಕೋಟಿ ರೂ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ ಎಂದು ಹೇಳಲಾಗ್ತಿದೆ. ನಟ ಸೇರಿದಂತೆ ಇನ್ನು 15 ಕಡೆ ದಾಳಿ ನಡೆದಿದೆ.
ಇದಕ್ಕೂ ಮೊದಲು ಡಿನೋ ಮೋರಿಯಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಎರಡು ವಿಚಾರಣೆ ನಡೆಸಿತ್ತು. ಇದೀಗ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇ ಡಿ ಅಧಿಕಾರಿಗಳ ತಂಡ ವಿಚಾರಣೆಯನ್ನು ತೀವ್ರಗೊಳಿಸಿವೆ.
