10
Jaipur: ರಾಜಸ್ಥಾನದ ಡುಂಗುರಪುರ ಜಿಲ್ಲೆಯ ಜೋಡಿಯೊಂದು ತಮ್ಮ 70 ವರ್ಷ ಲಿವ್ ಇನ್ ರಿಲೇಶನ್ಶಿಪ್ ಮುಗಿಸಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಮ ಅಂಗರಿ(95) ಹಾಗೂ ಜೀವ್ಲಿ ದೇವಿ (90) ಇದೀಗ ಮಾಡಿವೆ ಆಗಿದ್ದು, 70 ವರ್ಷ ಒಂದೇ ಮನೆಯಲ್ಲಿದ್ದು ಒಬ್ಬರಿಗೊಭರು ಆಸರೆ ಆಗಿದ್ದರು ಹಾಗೂ ಮದುವೆ ಆಗಿರಲಿಲ್ಲ. ಇವರಿಗೆ 4 ಹೆಣ್ಣುನ್ಹಗೂ 4 ಗಂಡು ಮಕ್ಕಳಿದ್ದು, ಅವರಲ್ಲಿ ಒಬ್ಬಾಕೆ ಮೃತಪಟ್ಟಿದ್ದಾಳೆ.
ಇವರ ನಾಲ್ವರು ಗಂಡು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬಹಳ ಹಿಂದೆಯೇ ಮದುವೆಯಾಗುವ ಕನಸು ಕಂಡಿದ್ದ ಜೋಡಿಗೆ ಇದೀಗ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಮದುವೆ ಮಾಡಿಸುವ ಮೂಲಕ ಅವರ ಕನಸನ್ನು ನನಸಾಗಿಸಿದ್ದಾರೆ.
ಇಡೀ ಊರಿಗೆ ಊರೇ ಈ ಮದುವೆಯಲ್ಲಿ ಸಂಭ್ರಮಿಸಿದ್ದು, ಸದ್ಯ ಈ ವಿಷಯ ವೈರಲ್ ಆಗಿದೆ ಹಾಗೂ ನೋಡುಗರು ಮೆಚ್ಚಿಗೆ ವ್ಯಕ್ತ ಪಡಿಸುತ್ತಿದ್ದಾರೆ.
