Home » Corruption: ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕ್ಕೊಂಡ ಹಿರಿಯ ಅಧಿಕಾರಿ

Corruption: ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕ್ಕೊಂಡ ಹಿರಿಯ ಅಧಿಕಾರಿ

0 comments

Corruption: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಓರ್ವ ಹಿರಿಯ ಅಧಿಕಾರಿ ಶುಕ್ರವಾರ 1.5 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನರೇಂದ್ರ ಕುಮಾರ್ (51) ಬೆಂಗಳೂರಿನ ಕೆಐಎಡಿಬಿಯಲ್ಲಿ ಸರ್ವೇ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ಕೆಚ್ ಸಿದ್ಧಪಡಿಸಲು ಮತ್ತು ಅದಕ್ಕೆ ಅನುಮೋದನೆ ನೀಡಲು ಆರೋಪಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರವಿ ಎಂಬಾತ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿರುತ್ತಾರೆ. ಹಾಗೂ ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

You may also like