Home » Star link entry: ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ, ದೊರಕಿದ ಲೈಸೆನ್ಸ್!

Star link entry: ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ, ದೊರಕಿದ ಲೈಸೆನ್ಸ್!

0 comments

ನವದೆಹಲಿ: ಭಾರತದಲ್ಲಿ ಸ್ಯಾಟಲೈಟ ಆಧಾರಿತ ಕಮ್ಯೂನಿಕೇಶನ್ ಸರ್ವೀಸ್ ನೀಡಲು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಗೆ ಪರವಾನಿಗೆ ದೊರಕಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಮೂಲಕ ಟೆಲಿಕಾಂ ಇಲಾಖೆಯಿಂದ ಅನುಮತಿ ಪಡೆದ ಸೆಟಲೈಟ್ ಕಮ್ಯೂನಿಕೇಶನ್ ಸರ್ವೀಸ್ ನೀಡುವ ಮೂರನೇ ಕಂಪನಿ ಸ್ಟಾರ್ ಲಿಂಕ್ ಆಗಿದೆ ಎಂದು ವರದಿ ತಿಳಿಸಿದೆ. ಅರ್ಜಿ ಸಲ್ಲಿಸಿದ 15ರಿಂದ 20 ದಿನದೊಳಗೆ ಕಂಪನಿಗೆ ಪ್ರಾಯೋಗಿಕ ತರಂಗಾಂತರ ಹಂಚಿಕೆ ಮಾಡಲಾಗುವುದು ಎಂದು ವರದಿ ವಿವರಿಸಿದೆ.

ಸ್ಟಾರ್ ಲಿಂಕ್ ಅನುಮತಿಗಾಗಿ 2022ರಿಂದಲೇ ಭಾರತಕ್ಕೆ ಎಂಟ್ರಿ ಕೊಡಲು ಪ್ರಯತ್ನಿಸುತ್ತಿತ್ತು. ಇದು ರಾಷ್ಟ್ರೀಯ ಭದ್ರತಾ ವಿಷಯ ಆದ ಕಾರಣ ವಿಳಂಬ ಆಗುತ್ತಿತ್ತು. ಅಂದ ಹಾಗೆ 2025ರ ಮಾರ್ಚ್ ನಲ್ಲಿ ಭಾರತದ ಭಾರ್ತಿ ಏರ್ ಟೆಲ್ ಕೂಡಾ ಸ್ಟಾರ್ ಲಿಂಕ್ಸ್ ನ ಹೈಸ್ಪೀಡ್ ಇಂಟರ್ನೆಟ್ ಸರ್ವಿಸ್ ನೀಡಲು ಸ್ಪೇಸ್ ಎಕ್ಸ್ ಜತೆ ಸಹಭಾಗಿತ್ವ ಹೊಂದುವ ಒಪ್ಪಂದ ಮಾಡಿಕೊಂಡಿದೆ.

You may also like