Home » Bomb Attack: ಪಾಕಿಸ್ತಾನದಲ್ಲಿ ಶಾಲಾ ವಾಹನದ ಮೇಲೆ ಬಾಂಬ್ ದಾಳಿ – ಆರು ಮಂದಿ ಸಾವು 

Bomb Attack: ಪಾಕಿಸ್ತಾನದಲ್ಲಿ ಶಾಲಾ ವಾಹನದ ಮೇಲೆ ಬಾಂಬ್ ದಾಳಿ – ಆರು ಮಂದಿ ಸಾವು 

0 comments

Bomb Attack: ಪಾಪಿ ಪಾಕಿಸ್ತಾನ ತಾವು ಬೆಳೆಸಿದ ಉಗ್ರರನ್ನು ಬಳಸಿಕೊಂಡು ಬೇರೆ ದೇಶದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತದೆ. ಆದರೆ ಇದೀಗ ಪಾಕಿಸ್ತಾನದಲ್ಲಿ ಶಾಲಾ ವಾಹನದ ಮೇಲೆ ಬಾಂಬ್ ದಾಳಿ ಸಂಭವಿಸಿದ್ದು, ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯದ ಖುಜ್ಜಾರ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ ಎಂದು ಇಂದು ಮಾಹಿತಿ ಲಭ್ಯವಾಗಿದೆ. ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಇಬ್ಬರು ವಯಸ್ಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಶಾಲಾ ಬಸ್ ಚಾಲಕ ಮತ್ತು ಸಹಾಯಕರು ಕೂಡ ಮೃತಪಟ್ಟಿದ್ದು, 24ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. ಈ ಘಟನೆ ನಡೆದ ಪ್ರದೇಶದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (BLA) ಎಂಬ ಉಗ್ರ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಕಳೆದ ತಿಂಗಳುಗಳಲ್ಲಿ ಈ ಸಂಘಟನೆ ಹಲವು ಬಾಂಬ್ ದಾಳಿ ಮತ್ತು ಗಲಭೆಗಳುನ್ನು ನಡೆಸಿದೆ. ಅದರಲ್ಲೂ ಮುಖ್ಯವಾಗಿ ಸೇನಾ ಸಿಬ್ಬಂದಿ ಮತ್ತು ಹೊರಗಿನಿಂದ ಬಂದ ಜನರನ್ನು ಗುರಿಯಾಗಿ ಇಟ್ಟುಕೊಂಡು ಈ ದಾಳಿಗಳನ್ನು ಮಾಡುತ್ತಿದೆ.

ದಾಳಿಯಲ್ಲಿ ಶಾಲಾ ವಾಹನದ ಚಾಲಕ ಮತ್ತು ಸಹಾಯಕರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿದ್ದ ವಾಹನದ ಮೇಲೆ ಈ ಬಾಂಬ್‌ ಸ್ಫೋಟ ನಡೆಸಲಾಗಿದೆ. ಅಲ್ಲದೆ ಮೂರು ವಿದ್ಯಾರ್ಥಿಗಳನ್ನು ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಫೋಟೋಗಳಲ್ಲಿ ಶಾಲಾ ಬಸ್ ಹಾಗೂ ಅದರಲ್ಲಿದ್ದ ಮಕ್ಕಳ ಶಾಲಾ ಬ್ಯಾಗ್‌ಗಳು ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ಕಂಡುಬಂದಿದೆ.

You may also like