Home » Bantwal: ಬಂಟ್ವಾಳ: ಕಾರಿಂಜ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Bantwal: ಬಂಟ್ವಾಳ: ಕಾರಿಂಜ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

0 comments

Bantwal: ಬಂಟ್ವಾಳ: ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಕೆರೆಗೆ ಇಳಿದಿದ್ದು, ಈ ಸಂದರ್ಭ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ.

ಮೃತ ಯುವಕನನ್ನು ಕಾರಿಂಗೆ ಕಂಗಿಹಿತ್ಲು ನಿವಾಸಿ ಗೂಡಿನಬಳಿಯ ಪಿಯುಸಿ ವಿದ್ಯಾರ್ಥಿ ಚೇತನ್‌ (17) ಎಂದು ಗುರುತಿಸಲಾಗಿದೆ.

ವಗ್ಗ ಕಾರಿಂಜ ಕ್ರಾಸ್‌ ಬಳಿಯ ಕಂಗಿತ್ತಿಲು ನಿವಾಸಿ ಶ್ರೀಧರ ಮೂಲ್ಯ ಅವರ ಪುತ್ರ. ಬಂಟ್ವಾಳ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಈತ. ಚೇತನ್‌ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ. ಅದೇ ರೀತಿ ಜೂ.7 ರ ಶನಿವಾರ ಸ್ನೇಹಿತ ಪ್ರಶ್ಚಿತ್‌ ಜೊತೆಗೆ ದೇವಸ್ಥಾನಕ್ಕೆ ಹೋಗಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಬಿದ್ದಿದ್ದಾನೆ.

ಪ್ರಶ್ಚಿತ್‌ಗೆ ಈಜು ಬಾರದ ಕಾರಣ ಬೊಬ್ಬೆ ಹೊಡೆದು ಸ್ಥಳೀಯರನ್ನು ಕರೆದಿದ್ದಾನೆ. ಕೂಡಲೇ ಸ್ಥಳೀಯರು ಬಂದಿದ್ದು, ಶ್ರವಣ್‌ ಜೈನ್‌ ಹಾಗೂ ಉದಯ ಮಾಂಗಾಜೆ ಅವರು ಕೆರೆಗೆ ಹಾರಿದ್ದಾರೆ. ನಂತರ ಚೇತನ್‌ನನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಿ ಚೇತನ್‌ ಸಾವಿಗೀಡಾಗಿದ್ದಾನೆ.

ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

You may also like