Home » Mangaluru: ಮಂಗಳೂರು: ದೇವರಿಗೆ ದೀಪ ಹಚ್ಚುವ ವೇಳೆ ಬಟ್ಟೆಗೆ ಬೆಂಕಿ ತಗುಲಿ ವೃದ್ಧೆ ಮೃತ್ಯು!

Mangaluru: ಮಂಗಳೂರು: ದೇವರಿಗೆ ದೀಪ ಹಚ್ಚುವ ವೇಳೆ ಬಟ್ಟೆಗೆ ಬೆಂಕಿ ತಗುಲಿ ವೃದ್ಧೆ ಮೃತ್ಯು!

0 comments

Mangaluru: ಪೂಜೆ ಮಾಡುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ತಗುಲಿ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ನಗರದ ಮೇರಿಹಿಲ್ ಸಮೀಪದ ಗುರುನಗರ ನಿವಾಸಿ ಸರೋಜಿನಿ (64) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಪುತ್ರ ಅಕ್ಷಯ್ (20)ಗೆ ಸುಟ್ಟ ಗಾಯವಾಗಿದೆ.

ಮಂಗಳವಾರ ರಾತ್ರಿ ಮನೆಯಲ್ಲಿ ದೇವರಿಗೆ ದೀಪವಿಟ್ಟು ಪೂಜೆ ಮಾಡುವ ವೇಳೆ ಸರೋಜಿನಿಯವರ ಬಟ್ಟೆಗೆ ಬೆಂಕಿ ತಗುಲಿತ್ತು. ಈ ವೇಳೆ ಪುತ್ರ ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಆತನಿಗೂ ಬೆಂಕಿಯಿಂದ ಸುಟ್ಟಗಾಯವಾಗಿತ್ತು. ವಿಷಯ ತಿಳಿದ ನೆರೆಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಂಕನಾಡಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

You may also like