Home » Bangalore Stampade: ʼಇಲ್ಲೇ ಓಡಾಡ್ತಿದ್ದ ನನ್ನ ಮಗ ಈಗ ಮಲಗಿದ್ದಾನೆʼ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿದ ತಂದೆ

Bangalore Stampade: ʼಇಲ್ಲೇ ಓಡಾಡ್ತಿದ್ದ ನನ್ನ ಮಗ ಈಗ ಮಲಗಿದ್ದಾನೆʼ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿದ ತಂದೆ

by Mallika
0 comments

Hasana: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಇವರಲ್ಲಿ ಹಾಸನದ ಬೇಲೂರಿನ ಭೂಮಿಕ್‌ ಕೂಡಾ ಓರ್ವ. ಆತನ ಮೃತದೇಹವನ್ನು ಮನೆಯ ಸಮೀಪದ ಜಾಗದಲ್ಲಿ ಮಣ್ಣು ಮಾಡಲಾಗಿದೆ. ಶನಿವಾರ ಭೂಮಿಕ್‌ನ ತಂದೆ ಲಕ್ಷ್ಮಣ್‌ ಮಗನ ಸಮಾಧಿ ಮೇಲೆ ಬಿದ್ದು ಒದ್ದಾಡಿ ಗೋಳಾಡುವ ದೃಶ್ಯ ನಿಜಕ್ಕೂ ಎಂತ ಕಟುಕನ ಹೃದಯದಲ್ಲಿ ಕಣ್ಣೀರು ತರಿಸುತ್ತದೆ.

ನನ್ನ ಮಗ ಬೇಕು…ಅಯ್ಯೋ ನನ್ನ ಮಗ ಎಲ್ಲೋದ ಎಂದು ಗೋಳಾಡುವ ದೃಶ್ಯ ನಿಜಕ್ಕೂ ಕರುಳು ಹಿಂಡಿಬರುವಂತದ್ದು. ಈ ತರಹ ಪರಿಸ್ಥಿತಿ ಯಾರಿಗೂ ಬರಬಾರದು. ಇದೇ ಜಾಗದಲ್ಲಿ ಮಗನ ಮಲಗಿಸಿದ್ದೀನಿ. ನನ್ನ ಮಗನಿಗೋಸ್ಕರ ಮಾಡಿದ್ದ ಜಾಗ ಇದು. ನನ್ನ ಮಗನ ಜೊತೆನೆ ನಾನೂ ಮಲಗುತ್ತೀನಿ. ಈ ತರಹ ಪರಿಸ್ಥಿತಿ ಯಾವ ತಂದೆಗೂ ತಾಯಿಗೂ ಬರಬಾರದು. ನೋಡಿ..ಯಾರಾರು ಬ್ಯಾಡ್ ಕಮೆಂಟ್ ಮಾಡ್ತಿರಾ, ಯಾವ ತಂದೆ ತಾಯಿಗೂ ಈ ಪರಿಸ್ಥಿತಿ ಬರಬಾರದು ಎಂದು ಗೋಳಾಡಿದ್ದಾರೆ. ಬೇಲೂರಿನ ಕುಪ್ಪಗೋಡಿನಲ್ಲಿರುವ ಭೂಮಿಕ್ ಸಮಾಧಿಯ ಮೇಲೆ ಲಕ್ಷ್ಮಣ್‌ ಬಿದ್ದು ಹೊರಳಾಡಿದ್ದಾರೆ.

You may also like