Home » Belthangady: ಉಜಿರೆಯಲ್ಲಿ ಮೂರು ಅಂಗಡಿಗೆ ನುಗ್ಗಿದ ಕಳ್ಳರು: ನಗದು ದೋಚಿ ಪರಾರಿ!

Belthangady: ಉಜಿರೆಯಲ್ಲಿ ಮೂರು ಅಂಗಡಿಗೆ ನುಗ್ಗಿದ ಕಳ್ಳರು: ನಗದು ದೋಚಿ ಪರಾರಿ!

0 comments

Belthangady: ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಜನಾರ್ಧನ ದೇವಸ್ಥಾನಕ್ಕೆ ಹೋಗುವ ದ್ವಾರದ ಮುಂಭಾಗದಲ್ಲಿರುವ ಮೂರು ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿ ಪರಾರಿಯಾಗಿರುವ ಘಟನೆ ಜೂ.7ರಂದು ಮಧ್ಯರಾತ್ರಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಾಜಿ ಎಂಟರ್ ಪ್ರೈಸಸ್ ನಿಂದ 30000 ನಗದು ಮತ್ತು ಗ್ಲಾಸ್ ಹೊಡೆದು ಶ್ರೀ ಗಣೇಶ ಇಲೆಕ್ಟಿಕಲ್ ಹಾಗೂ ಹಳೆಯ ಮಧುರ ಪ್ರಿಂಟರ್ಸ್‌ಗೆ ನುಗ್ಗಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ ಮೂರು ಅಂಗಡಿ ಕೋಣೆಗಳು ಒಂದಕ್ಕೊಂದು ಹತ್ತಿರವಿದೆ ಕೆಲವೇ ನಿಮಿಷಗಳಲ್ಲಿ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ (Belthangady) ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

You may also like