4
Sullia: ಬೈಕ್‌ಗಳು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಆಸ್ಪತೆಗೆ ದಾಖಲಾದ ಘಟನೆ ನಡೆದಿದೆ. ಈ ಘಟನೆ ವಿಷ್ಣು ಸರ್ಕಲ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಕೆಲಸಕ್ಕೆಂದು ಬೈಕ್‌ನಲ್ಲಿ ಹೋಗುತ್ತಿದ್ದ ಗದಗ ಮೂಲದ ದಂಪತಿಯಿದ್ದ ಬೈಕ್‌ಗೆ ಉಬರಡ್ಕ ಕಡೆಯಿಂದ ಬರುತ್ತಿದ್ದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಾಯಗೊಂಡ ಇವರನ್ನು ಆಸ್ಪತೆಗೆ ದಾಖಲು ಮಾಡಲಾಗಿದೆ.
ಇನ್ನೊಂದು ಬೈಕ್‌ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.
