Home » Bantwala: ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ 13 ನಿರ್ದೇಶಕರ ಅಮಾನತು

Bantwala: ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ 13 ನಿರ್ದೇಶಕರ ಅಮಾನತು

by Mallika
0 comments

Bantwala: ಭೂ ಅಭಿವೃದ್ಧಿ ಬ್ಯಾಂಕಿನ 13 ಮಂದಿ ನಿರ್ದೇಶಕರನ್ನು ಅಮಾನತು ಮಾಡಿ ಮಂಗಳೂರು ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿ 6 ಮಂದಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿದ್ದು, ಇದೇ ಬ್ಯಾಂಕಿನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸುದರ್ಶನ್‌ ಜೈನ್‌ ಪ್ರಶ್ನಿಸಿ ಸಹಕಾರಿ ಇಲಾಖೆಗೆ ದೂರನ್ನು ನೀಡಿದ್ದರು. ದೂರುದಾರ ಸುದರ್ಶನ್‌ ಜೈನ್‌ ಸಹಿತ ಹಾಲಿ ಅಧ್ಯಕ್ಷ ಅರುಣ್‌ ರೋಶನ್‌ ಡಿಜೋಜ ಸೇರಿ 13 ನಿರ್ದೇಶಕರನ್ನು ಮೂರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

You may also like