Home » Vittla: ವಿಟ್ಲ: ಅಕ್ರಮ ಜುಗಾರಿ ಆಡುವ ಸ್ಥಳಕ್ಕೆ ದಾಳಿ: ಕಾನೂನು ಕ್ರಮ ಜರುಗಿಸದೆ ಹಣಕ್ಕೆ ಬೇಡಿಕೆ: ಪಿ ಎಸ್ ಐ ಅಮಾನತು!!

Vittla: ವಿಟ್ಲ: ಅಕ್ರಮ ಜುಗಾರಿ ಆಡುವ ಸ್ಥಳಕ್ಕೆ ದಾಳಿ: ಕಾನೂನು ಕ್ರಮ ಜರುಗಿಸದೆ ಹಣಕ್ಕೆ ಬೇಡಿಕೆ: ಪಿ ಎಸ್ ಐ ಅಮಾನತು!!

0 comments

Vittla: ವಿಟ್ಲ (Vittla) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಸದ್ರಿ ಸ್ಥಳಕ್ಕೆ ಕೌಶಿಕ್ ಬಿ ಸಿ, ಪಿ ಎಸ್ ಐ, ವಿಟ್ಲ ಪೊಲೀಸ್‌ ಠಾಣೆ ರವರು ದಿನಾಂಕ 08.05.2025 ರಂದು ದಾಳಿ ಮಾಡಿದಾಗ, ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗಿ ದ್ದು, ಸ್ಥಳದಲ್ಲಿ ಮೋಟಾರು ಸೈಕಲ್ ಕಂಡುಬಂದಿರುತ್ತದೆ.

ಆದ್ರೆ ಪಿ ಎಸ್ ಐ ಕೌಶಿಕ್ ಬಿ ಸಿ ರವರು ಈ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸದೇ ಸದ್ರಿ ಬೈಕ್‌ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಸದ್ರಿ ಬೈಕ್ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರವಾಗಿರುತ್ತದೆ.

ಇದೀಗ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯ ಮೇಲೆ ದಿನಾಂಕ 12.05.2025 ರಂದು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

You may also like