Uttara Khand : ಇಂದು ಮದುವೆಯ ಸಂದರ್ಭದಲ್ಲಿ ಕೆಲವು ನವ ವಧುಗಳು ಹಾಗೂ ಮದುವೆಯ ಬಳಿಕ ಕೆಲವು ಖತರ್ನಾಕ್ ಹೆಂಡತಿಯರು ನಡೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಯಾವ ಯುವಕರಿಗೂ ಕೂಡ ಮದುವೆಯಾಗುವುದೇ ಬೇಡ ಎನಿಸುತ್ತದೆ. ಇದೀಗ ಅಂತದ್ದೇ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಯುವಕರನ್ನು ಬೆಚ್ಚಿ ಬೇಡಿಸುವಂತೆ ಮಾಡಿದೆ.
ಹೌದು, ನಾವು ಹೇಳ ಹೊರೆಟಿರುವುದು ತಾನು ಖ್ಯಾತ ವಕೀಲೆಯೆಂದು ಪಟ್ಟ ಕಟ್ಟಿಕೊಂಡು ತಿರುಗಾಡುತ್ತಿದ್ದ ನಕಲಿ ವಕೀಲೆಯೊಬ್ಬಳ ಸ್ಟೋರಿ. ಈಕೆ ನಕಲಿ ವಕೀಲೆಯಾಗಿಯೇ ಇದ್ದುಕೊಂಡಿದ್ದರೆ ಇಷ್ಟು ಸುದ್ದಿ ಆಗುತ್ತಿರಲಿಲ್ಲವೇನೋ. ಬದಲಿಗೆ ಯುವಕನೊಬ್ಬನಿಗೆ ಮಿಸ್ ಕಾಲ್ ಕೊಟ್ಟು ಹೆಂಡತಿಯಾಗಿ, ತನ್ನ ಗಂಡನನ್ನೇ ಕೊಲೆಗೆ ಸ್ಕೆಚ್ ಹಾಕಿ ಇದೀಗ ಪೊಲೀಸರ ಕೈಗೆ ತಗಲಾಕೊಂಡಿದ್ದಾಳೆ.
ಯಸ್, ಉತ್ತರಾಖಂಡದಲ್ಲಿ ಹೈಕೋರ್ಟ್ ವಕೀಲೆಯಾಗಿ ನಟಿಸುತ್ತಿದ್ದ ಹಿನಾ ರಾವತ್ ಎಂಬ ಯುವತಿ ಪ್ರಕರಣ ಇದು. ಯುವಕನನೊಬ್ಬನನ್ನು ಪ್ರೇಮಜಾಲಕ್ಕೆ ಸಿಲುಕಿಸಿ, ಆತನನ್ನು ಮದುವೆ ಕೂಡ ಆಗಿ ಇದೀಗ, ಕೊಲೆ ಬೆದರಿಕೆ ಹಾಕಿ 30 ಲಕ್ಷ ರೂಪಾಯಿಗಳ ಭಾರಿ ಮೊತ್ತದ ಬೇಡಿಕೆ ಇಟ್ಟಿದ್ದಾಳೆ. ಆದರೆ ಯುವಕನ ಧೈರ್ಯದಿಂದಾಗಿ ಆತ ಬಚಾವಾಗಿದ್ದು, ಈ ಖತರ್ನಾಕ್ ಲೇಡಿ ಅರೆಸ್ಟ್ ಆಗಿದ್ದಾಳೆ.
ಏನಿದು ಘಟನೆ?
ಮೇ 2 ರಂದು ನೈನಿತಾಲ್ ಹೈಕೋರ್ಟ್‌ನಲ್ಲಿ ತಾನು ವಕೀಲೆ ಎಂದು ಪೋಸ್ ಕೊಟ್ಟಿರೋ ಅಂಕಿತಾ ಶರ್ಮಾ ಎಂದು ತನ್ನನ್ನು ತಾನು ಗುರುತಿಸಿಕೊಂಡಿದ್ದ ಯುವತಿ, ದೀಪಕ್ ಅವರಿಗೆ ವಾಟ್ಸ್ಆಯಪ್ ಕರೆ ಮಾಡಿದ್ದಳು. ಕೊನೆಗೆ ಸಾರಿ, ನನ್ನ ಕಕ್ಷಿದಾರರಿಗೆ ಮಾಡಬೇಕಿದ್ದ ಕರೆ ನಿಮಗೆ ಮಾಡಿದೆ, ಇದು ಆಕಸ್ಮಿಕ ಕರೆ ಎಂದು ಹೇಳಿಕೊಂಡಳು. ನಂತರ ಆಕೆ, ವಾಟ್ಸ್ಆಯಪ್ ಚಾಟ್‌ಗಳ ಮೂಲಕ ದೀಪಕ್ ಅವರನ್ನು ಸಿಹಿ ಸಿಹಿ ಮಾತುಗಳಿಂದ ಚಾಟ್ನಲ್ಲಿಯೇ ಮೋಡಿ ಮಾಡಿದಳು. ಈ ಮಾತುಕೆ ಕ್ರಮೇಣ ಪ್ರೇಮಕ್ಕೆ ತಿರುಗಿತು. ಇದು ಮದುವೆಯವರೆಗೂ ತಲುಪಿತು.
ಕುಳಿತಲ್ಲಿಯೇ ಸುಂದರ ವಕೀಲೆ ಸಿಕ್ಕ ಖುಷಿಗೆ ದೀಪಕ್ಗೆ ಸ್ವರ್ಗವೇ ಮೂರು ಗೇಣು ಎನ್ನುವಂತಾಗಿ ಮದುವೆಗೂ ಒಪ್ಪಿಕೊಂಡರು. ಮೊದಲಿಗೆ ಸ್ಟೀಲ್ ಗ್ರಿಲ್ಲಿಂಗ್ ಎನ್ನುವ ಯೋಜನೆಯ ಒಪ್ಪಂದವನ್ನು ಪಡೆಯುವ ನೆಪದಲ್ಲಿ ಆಕೆ ದೀಪಕ್ನಿಂದ 5 ಲಕ್ಷ ರೂಪಾಯಿ ಪಡೆದುಕೊಂಡಳು. ಆಗಲೂ ತಾವು ಹಳ್ಳಕ್ಕೆ ಬಿದ್ದಿರೋದು ಇವರಿಗೆ ತಿಳಿಯಲೇ ಇಲ್ಲ. ಐದು ಲಕ್ಷ ರೂಪಾಯಿ ಯಾವಾಗ ಸಿಕ್ಕಿತೋ ಮದುವೆಯನ್ನೂ ಮಾಡಿಕೊಂಡ ಖತರ್ನಾಕ್ ಲೇಡಿ, ಕೊನೆಗೆ ದೀಪಕ್ ಮೇಲೆ 30 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಲು ಪ್ರಾರಂಭಿಸಿದಳು.
ಅಷ್ಟು ಹಣ ತನ್ನಲ್ಲಿ ಇಲ್ಲ ಎಂದು ದೀಪಕ್ ಹೇಳಿದಾಗ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದಾಗಲೇ ಗೊತ್ತಾಗಿದ್ದು ತಾವು ಹೋಗಿದ್ದು ಮೋಸ ಎನ್ನುವುದು! ಆಗ ದೀಪಕ್ ಕಕ್ಕಡ್ ಜೂನ್ 5 ರಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣಿಕಾಂತ್ ಮಿಶ್ರಾ ಅವರಿಗೆ ತಮ್ಮ ಪತ್ನಿಯ ವಿರುದ್ಧ ವಿವರವಾದ ದೂರು ದಾಖಲಿಸಿದ್ದಾರೆ.
ಇನ್ನು ಪೊಲೀಸರ ಪ್ರಕಾರ, ಹಿನಾ ನಕಲಿ ಗುರುತುಗಳು ಮತ್ತು ಆಕರ್ಷಕ ಮುಖಚಿತ್ರಗಳ ಮೂಲಕ ಜನರನ್ನು ವಂಚಿಸುತ್ತಿದ್ದಾಳೆ. ವಧುವಿನಂತೆ ನಟಿಸಲು ಮತ್ತು ಸುಳ್ಳು ಅ*ತ್ಯಾಚಾರ ಪ್ರಕರಣಗಳಲ್ಲಿ ಜನರನ್ನು ಸಿಲುಕಿಸಲು ವೈವಾಹಿಕ ತಾಣಗಳನ್ನು ಬಳಸಿಕೊಳ್ಳುತ್ತಿರುವುದು ತಿಳಿದಿದೆ. ಪೊಲೀಸರು ಈಗ ದಂಧೆಗೆ ಸಂಬಂಧಿಸಿರಬಹುದಾದ ಇತರರನ್ನು ಪತ್ತೆಹಚ್ಚುತ್ತಿದ್ದಾರೆ
