6
Kolluru : ಸುಮಾರು ₹90 ಲಕ್ಷ ಮೌಲ್ಯದ ನವರತ್ನ ಕಲ್ಲುಗಳೊಂದಿಗೆ ಅಲಂಕೃತವಾದ 1 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಬುಧವಾರ ಶ್ರೀ ಕೊಲ್ಲೂರು (Kolluru) ಮೂಕಾಂಬಿಕಾ ದೇವಿಗೆ, ತುಮಕೂರು ಜಿಲ್ಲೆಯ ಶಿರಾದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ| ಕೆ. ಲಕ್ಷ್ಮೀನಾರಾಯಣ ಅವರ ಕುಟುಂಬವಿಂದು ನೀಡಿದ್ದು , ಅವರು 45 ವರ್ಷಗಳ ಹಿಂದೆಯೇ ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಲು ಸಂಕಲ್ಪ ಮಾಡಿಕೊಂಡಿದ್ದರು. ಆ ಸಂಕಲ್ಪ ಇಂದು ಸಂಪೂರ್ಣಗೊಂಡಿದೆ.
ಬುಧವಾರ ಬೆಳಿಗ್ಗೆ ರಥಬೀದಿಯಿಂದ ವಾದ್ಯಘೋಷದೊಂದಿಗೆ ಶೋಭಾ ಯಾತ್ರೆಯ ರೂಪದಲ್ಲಿ ಚಿನ್ನದ ಮುಖವಾಡವನ್ನು ದೇಗುಲದ ಆವರಣಕ್ಕೆ ತಂದು, ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್ ಮತ್ತು ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ದೇವಿಗೆ ಅರ್ಪಿಸಲಾಯಿತು.
