Home » Viral Video : ದೇವರು ಬರುತ್ತೆ ಎಂದು ನಾಟಕ ಮಾಡುತ್ತಿದ್ದ ಮಹಿಳೆ – ಕೈಮೇಲೆ ಕರ್ಪೂರ ಹಚ್ಚಿ ಮಹಿಳೆ ಮುಖವಾಡ ಬಿಚ್ಚಿಟ್ಟ ತಾತ!

Viral Video : ದೇವರು ಬರುತ್ತೆ ಎಂದು ನಾಟಕ ಮಾಡುತ್ತಿದ್ದ ಮಹಿಳೆ – ಕೈಮೇಲೆ ಕರ್ಪೂರ ಹಚ್ಚಿ ಮಹಿಳೆ ಮುಖವಾಡ ಬಿಚ್ಚಿಟ್ಟ ತಾತ!

by V R
0 comments

Viral Video : ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೂಡ ಅನೇಕರು ಮೂಢನಂಬಿಕೆ ಲೋಕದಲ್ಲಿ ತೇಲಾಡುತ್ತಿದ್ದಾರೆ. ಹಳ್ಳಿ ಪ್ರದೇಶದಲ್ಲಂತೂ ಇದು ಎಥೇಚ್ಛವಾಗಿದೆ. ಅದರಲ್ಲೂ ಮೈ ಮೇಲೆ ದೆವ್ವ, ದೇವರುಗಳು ಬರುತ್ತೇವೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಾ, ವಂಚಿತರಸುತ್ತಿರುವ ಅನೇಕರನ್ನು ನಾವು ಕಾಣಬಹುದು. ಇದೀಗ ಮಹಿಳೆಯೊಬ್ಬಳು ತನ್ನ ಮೇಲೆ ದೇವರು ಬರುತ್ತೇನೆ ಎಂದು ಹೇಳಿಕೊಂಡು ನಾಟಕ ಮಾಡುತ್ತಿದ್ದ ಸಂದರ್ಭದಲ್ಲಿ ತಾತನೊಬ್ಬ ಬಂದು ಆಕೆಯ ಮುಖವಾಡ ಕಳಚಿಟ್ಟ ವಿಚಿತ್ರ ಘಟನೆ ಒಂದು ನಡೆದಿದೆ.

ಹೌದು, ನಿನ್ನೆ ಯಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲಾಗುತ್ತಿದೆ. ಇದರಲ್ಲಿ ಮೈ ಮೇಲೆ ದೇವರು ಬರುತ್ತದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಮಹಿಳೆಯ ಮುಖವಾಡವನ್ನು ಮುದುಕನೊಬ್ಬ ಅನಾವರಣಗೊಳಿಸಿದ ದೃಶ್ಯ ಇದೆ.

ಬೈರಲಾದ ವಿಡಿಯೋದಲ್ಲಿ ಹಿರಿಯ ನಾಗರಿಕರು ಒಬ್ಬರು ಹಳದಿ ಬಟ್ಟೆ ಸೀರೆಯುಟ್ಟ ಮಹಿಳೆಯ ಕೈಮೇಲೆ ಕರ್ಪೂರ ಇಟ್ಟು ಬೆಂಕಿ ಹೆಚ್ಚುತ್ತಾರೆ. ಆಕೆಯ ಕೈಹಿಡಿದ ತಾತ ಇನ್ನೂ ಹೆಚ್ಚು ಹೊತ್ತು ಹಾಗೆ ಹಿಡಿದುಕೊಳ್ಳುವ ಹಾಗೆ ಮಾಡಿದ್ದಾರೆ. ಈ ಸಮಯದಲ್ಲಿ ಬೆಂಕಿಯ ಶಾಖ ತಡೆಯಲಾಗದ ಮಹಿಳೆ ಕರ್ಪೂರವನ್ನು ಕೆಳಕ್ಕೆ ಬೀಳಿಸಿದ್ದಾರೆ. ಬೆಂಕಿ ಸುಟ್ಟ ನೋವನ್ನು ಆಕೆಯ ಮುಖದಲ್ಲಿ ಕಾಣಬಹುದಾಗಿದೆ.

ಹೀಗೆ ಮಹಿಳೆ ಕೈಸುಟ್ಟುಕೊಂಡು ತೆಪ್ಪಗಾದ ಕೂಡಲೇ ಆ ತಾತ ʼಎಲ್ಲಮ್ಮಾ ದೇವರು?ʼ ಎಂದು ಪ್ರಶ್ನಿಸಿ ಎಲ್ಲ ನಾಟಕ ಎಂಬುದನ್ನು ಬಯಲಿಗೆಳೆದಿದ್ದಾರೆ. ಅಲ್ಲದೆ ದೇವರು ಯಾರ ಮೇಲೆಯೂ ಬರುವುದಿಲ್ಲ, ದೇವರು ಮನುಷ್ಯರಲ್ಲಿ ಇದ್ದಾರೆ ಹೀಗೆ ವಂಚಿಸುವವರನ್ನು ನಂಬಬೇಡಿ ಎಂದು ಆತಾತ ಹೇಳುವುದನ್ನು ಕೇಳಬಹುದು.

You may also like