3
Fake doctor: ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಈ ಸಂಬಂಧ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಮಹಮ್ಮದ್ ಸೈಫುಲ್ಲಾ ಬಾಲಗೇರಿಯಲ್ಲಿ ಆಲ್- ಖೈರ್ ಪೌಂಡೇಷನ್ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದನು.
ಶಿವರಾಜು ಎಂಬುವವರು ಮಂಗಳವಾರ ಸಂಜೆ 6 ತಿಂಗಳ ಶರಣ್ಯಾಳ ಕಾಲಿನಲ್ಲಿ ಗಂಟು ಇದ್ದ ಕಾರಣಕ್ಕೆ ಸೈಫುಲ್ಲಾನ ಬಳಿ ಹೋಗಿದ್ದರು. ಆತ ಇಂಜೆಕ್ಷನ್ ನೀಡಿದ ಬಳಿಕ ಅಸ್ವಸ್ಥಗೊಂಡಿದ್ದ ಮಗು ಬುಧವಾರ ಸಾವನ್ನಪ್ಪಿತ್ತು. ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ನೀಡಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಜಿಲ್ಲಾ ಆಸ್ಪತ್ರೆ ಮೂಲದಿಂದ ಮಾಹಿತಿಯಿದೆ.
