Home » Udupi: ಕ್ರೇನ್ ತೊಟ್ಟಿಲಿನಿಂದ ಕೆಳಗೆ ಬಿದ್ದು ಮಹಿಳೆ ಸಾವು: ಇನ್ನೋರ್ವ ಮಹಿಳೆ ಗಂಭೀರ ಗಾಯ

Udupi: ಕ್ರೇನ್ ತೊಟ್ಟಿಲಿನಿಂದ ಕೆಳಗೆ ಬಿದ್ದು ಮಹಿಳೆ ಸಾವು: ಇನ್ನೋರ್ವ ಮಹಿಳೆ ಗಂಭೀರ ಗಾಯ

0 comments
Death

Udupi: ಉಡುಪಿಯಲ್ಲಿ ಮನೆಯ ಸ್ಲಾಬ್ ಸೋರಿಕೆಯಾದಂತಹ ಸ್ಥಳವನ್ನು ಪರೀಕ್ಷಿಸುತ್ತಿದ್ದ ವೇಳೆ ಕ್ರೇನ್ ತೊಟ್ಟಿಲಿನಿಂದ ಆಯತಪ್ಪಿ ನೆಲಕ್ಕೆ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು , ಇನ್ನೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಕೋರ್ಟ್ ಹಿಂಭಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಶನಿವಾರ ಸಂಭವಿಸಿದೆ.

ಮೃತ ಮಹಿಳೆಯನ್ನು ಫ್ರಾನ್ಸಿಸ್ ಫುಟೊರ್ಡೋ (65 ) ಎಂದು ಗುರುತಿಸಲಾಗಿದೆ. ಇವರು ಮನೆ ಮಾಲೀಕರ ಸಹೋದರ ಎಂದು ತಿಳಿದುಬಂದಿದೆ. ಮನೆ ಕೆಲಸದಾಕೆ ಮಲ್ಪೆ ಕಲ್ಮಾಡಿ ನಿವಾಸಿ ಶಾರದ (35) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಮಾಲೀಕನ ಸಹೋದರ ಫ್ರಾನಿಸ್ಸ್ ಹಾಗೂ ಕೆಲಸದಾಕೆ ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರಿಶೀಲಿಸಲು ಕ್ರೇನ್ ನಲ್ಲಿ ಹೋಗಿದ್ದು, ಈ ವೇಳೆ ಕ್ರೇನ್ ತೊಟ್ಟಿಲಿನಿಂದ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆ ತಿಳಿದು ತಕ್ಷಣವೇ ಧಾವಿಸಿ ಬಂದ ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಸ್ಥಳೀಯರ ಸಹಕಾರದೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಇಬ್ಬರು ಬಿದ್ದು ನರಳಾಡುತ್ತಿದ್ದರೂ, ಕ್ರೇನ್ ಚಾಲಕ ರಕ್ಷಣೆಗೆ ಬಾರದೆ ಕ್ರೇನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ‌ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Flight Mileage: ವಿಮಾನ ಎಷ್ಟು ಮೈಲೇಜ್ ಕೊಡುತ್ತೆ ?

You may also like