Home » Bengaluru: ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ

Bengaluru: ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ

0 comments
Aadhaar card

Bengaluru: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಡಯಾಲಿಸಿಸ್ ಸೇವೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್‌ ಕಾರ್ಯಕ್ರಮ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಇದರಡಿ ಯಾವುದೇ ಡಿಬಿಟಿ (ನಗದು ನೇರ ವರ್ಗಾವಣೆ) ಹಣ ವರ್ಗಾವಣೆಗೆ ಆಧಾರ್‌ ಸಂಖ್ಯೆ ಅಗತ್ಯವಿರುವ ಹಿನ್ನೆಲೆಯಲ್ಲಿ ಡಯಾಲಿಸಿಸ್‌ ಸೇವೆಯ ಪ್ರಯೋಜನ ಪಡೆಯಲು ಬಯಸುವವರು ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು ಎಂದು ತಿಳಿಸಿದೆ.

ಆಧಾರ್ ಕಾರ್ಡ್ ಇಲ್ಲದ ಕಾರಣ ಯಾರಿಗೂ ಕೂಡ ಸೇವೆಯನ್ನು ನಿರಾಕರಿಸದೆ ಬೇರೆ ಗುರುತಿನ ಚೀಟಿಯಲ್ಲಿಯೂ ಕೂಡ ಸೇವೆಯನ್ನು ನೀಡಬಹುದು ಎಂದು ತಿಳಿಸಿದೆ. ಯಾವುದೇ ವ್ಯಕ್ತಿ ಆಧಾರ್‌ ಹೊಂದಿಲ್ಲದ್ದರೆ ಅಥವಾ ಈವರೆಗೆ ಆಧಾರ್‌ಗೆ ನೋಂದಣಿ ಆಗದಿದ್ದು, ಆಧಾರ್‌ ಕಾಯ್ದೆಯ ಸೆಕ್ಷನ್‌ 3ರ ಪ್ರಕಾರ ಆಧಾರ್‌ ಪಡೆಯಲು ಅರ್ಹರಾಗಿದ್ದರೆ ಅವರು ಆಧಾರ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.

You may also like