Home » LinkedIn : ಯುವತಿಯ ಸೊಂಟ ನೋಡಲು 5,000 ಆಫರ್ ಒಡ್ಡಿದ ಭೂಪ!!

LinkedIn : ಯುವತಿಯ ಸೊಂಟ ನೋಡಲು 5,000 ಆಫರ್ ಒಡ್ಡಿದ ಭೂಪ!!

by V R
0 comments

LinkedIn : ಮನುಷ್ಯ ಎಂದ ಮೇಲೆ ನಾನಾ ರೀತಿಯ ಆಸೆ, ಆಕಾಂಕ್ಷೆಗಳು ಇರುತ್ತವೆ. ಕೆಲವೊಬ್ಬರು ತಮ್ಮ ಆಸೆಗಳನ್ನು ಈಡೇರಿಸಲು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಅಂತೆಯೇ ಇದೀಗ ಚೆನ್ನೈನಲ್ಲಿ ಉದ್ಯೋಗಿ ಒಬ್ಬ ಯುವತಿಯ ಸೊಂಟ ನೋಟ ನೋಡಲು 5,000 ಆಫರ್ ಕೊಟ್ಟಿದ್ದಾನೆ.

ಹೌದು, ಚೆನ್ನೈನ ಆಶಿಕ್ ಪ್ರಯಾಣ ನೆಹರು ಎಂಬ ವ್ಯಕ್ತಿಯೊಬ್ಬ ತನ್ನ ಸೊಂಟವನ್ನು ತೋರಿಸಲು 5,000 ರೂಪಾಯಿಗಳ ಆಫರ್ ನೀಡಿದ್ದಾನೆ ಎಂದು ಶುಭಾಂಗಿ ಎಂಬ ಯುವತಿ ಆರೋಪಿಸಿದ್ದಾರೆ.

ಈ ಕುರಿತು ಶುಭಾಂಗಿ ಅವರು ‘ನಾನು ನಿಮಗೆ 5,000 ರೂ.ಗಳನ್ನು ಪಾವತಿಸುತ್ತೇನೆ, ನಿಮ್ಮ ಸೊಂಟವನ್ನು ನನಗೆ ತೋರಿಸಿ’ ಎಂದು ಅವನು ಸಂದೇಶ ಕಳುಹಿಸಿದ್ದಾನೆ. ಈ ಅನುಚಿತ ಆಫರ್‌ಗೆ ಆಘಾತಗೊಂಡ ಶುಭಾಂಗಿ, ಆತನ ಪ್ರೊಫೈಲ್‌ನ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡು ಈ ಘಟನೆಯನ್ನು ಲಿಂಕ್ಡ್‌ಇನ್‌ನಲ್ಲಿ ಬಹಿರಂಗಪಡಿಸಿದ್ದಾರೆ

ಸಧ್ಯ ಶುಭಾಂಗಿಯವರ ಈ ಪೋಸ್ಟ್ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅನೇಕರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ, ಜೊತೆಗೆ ಆನ್‌ಲೈನ್ ವೇದಿಕೆಗಳಲ್ಲಿ ಮಹಿಳೆಯರಿಗೆ ಎದುರಾಗುವ ಕಿರುಕುಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

You may also like