Sindhu Water: ಪೆಹಾಲ್ಗಮ್ ದಾಳಿ ಬಳಿಕ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಹಲವು ರೀತಿಯ ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ. ಅದರಲ್ಲಿ ಸಿಂಧೂ ನದಿ ನೀರನ್ನು ಬಂದ್ ಮಾಡಿರುವುದು ಕೂಡ ಒಂದು. ಇದೀಗ ಸಿಂಧೂ ನದಿಯ ಹೆಚ್ಚುವರಿ ನೀರನ್ನು ಭಾರತದ ಈ ಮೂರು ರಾಜ್ಯಗಳಿಗೆ ಹರಿಸಲು ಸರ್ಕಾರವು ಚಿಂತನೆ ನಡೆಸಿದೆ.
ಹೌದು, ಸಿಂಧೂ ನದಿ ವ್ಯವಸ್ಥೆಯ ಹೆಚ್ಚುವರಿ ನೀರನ್ನು ಬಳಸಲು ತ್ವರಿತ ಅಲ್ಪಾವಧಿ ಕ್ರಮಗಳನ್ನು ಕೈಗೊಂಡ ಭಾರತ ವಿಸ್ತೃತ ಸಿಂಧೂ ಯೋಜನೆಯನ್ನು ಜಾರಿಗೊಳಿಸಲು ಚಿಂತಿಸಿದೆ. ಈ ನಿಟ್ಟಿನಲ್ಲಿ 113 ಕಿಲೋಮೀಟರ್ ಉದ್ದದ ಕಾಲುವೆಯನ್ನು ನಿರ್ಮಿಸಿ, ಹೆಚ್ಚುವರಿ ನೀರನ್ನು ಜಮ್ಮು& ಕಾಶ್ಮೀರದಿಂದ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನಕ್ಕೆ ವರ್ಗಾಯಿಸುವ ಕಾರ್ಯಸಾಧ್ಯತೆಗಳ ಬಗ್ಗೆ ಅಧ್ಯಯನ ಆರಂಭಿಸಿದೆ.
ಅಂದಹಾಗೆ ಸಿಂಧೂ ನದಿ ನೀರನ್ನು ರಾಜಸ್ಥಾನದ ಶ್ರೀಗಂಗಾನಗರ ಪ್ರದೇಶಕ್ಕೆ ಮೂರು ವರ್ಷಗಳ ಒಳಗಾಗಿ ಕಾಲುವೆ ಮೂಲಕ ಹರಿಸಲಾಗುವುದು ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಚೆಜಾಬ್-ರಾವಿ-ಬಿಯಾಸ್-ಸಟ್ಲೇಜ್ ಜೋಡಣೆ ಯೋಜನೆಯ ಪರಿಕಲ್ಪನೆ ರೂಪುಗೊಂಡಿದೆ.
ಇದು ಪ್ರಸ್ತುತ ಇರುವ ಕಾಲುವೆಯನ್ನು ಜಮ್ಮು, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ 13 ಕಡೆಗಳಲ್ಲಿ ಸಂಪರ್ಕಿಸಲಿದೆ. ಈ ಮೂಲಕ ಇಂದಿರಾ ಗಾಂಧೀ ಕಾಲುವೆಗೆ ನೀರು ಹರಿಯಲಿದೆ ಎಂದು ಮೂಲಗಳು ವಿವರಿಸಿವೆ.
