8
Mangaluru: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಈ ಕಾರಣದಿಂದಾಗಿ ಸುರತ್ಕಲ್ ನಂತೂರು ಜಂಕ್ಷನ್ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮಿಟರ್ ವೇಗವನ್ನು ಐವತ್ತಕ್ಕೆ ನಿಗದಿಪಡಿಸಲಾಗಿದೆ. ಹಾಗೂ ಇದು ಸೆಪ್ಟೆಂಬರ್ ವರೆಗೂ ಚಾಲ್ತಿಯಲ್ಲಿರುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಇನ್ನು ಮಳೆಯೂ ಹೆಚ್ಚಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಂಡಿಗಳು ಇರುವುದರಿಂದ, ಅಲ್ಲಿನ ಪ್ರಯಾಣ ಸೂಕ್ತವಲ್ಲ ಎಲ್ಲೆಲ್ಲಿ ಸರ್ವಿಸ್ ರಸ್ತೆಗಳಿವೆ ಅದನ್ನೇ ಬಳಸಿ ಎಂದು ಪ್ರಾಧಿಕಾರ ಸಲಹೆ ನೀಡಿದೆ.
