Home » Mangaluru: ತಂದೆ ಸೇದಿ ಎಸೆದಿದ್ದ ಬೀಡಿ ನುಂಗಿ 10 ತಿಂಗಳ ಮಗು ಸಾವು

Mangaluru: ತಂದೆ ಸೇದಿ ಎಸೆದಿದ್ದ ಬೀಡಿ ನುಂಗಿ 10 ತಿಂಗಳ ಮಗು ಸಾವು

0 comments
Baby Alive before Cremation

Mangalore: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಡ್ಯಾರ್‌ನಲ್ಲಿ ನಡೆದಿದೆ.

ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶ್‌ಕುಮಾರ್‌ ಮೃತಪಟ್ಟಿದೆ.

ಶನಿವಾರ ಮಧ್ಯಾಹ್ನ 1.30 ರ ವೇಳೆ ಘಟನೆ ನಡೆದಿದೆ. ಮಗುವನ್ನು ಅಪರಾಹ್ನ 3.30 ರ ವೇಳೆಗೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ರವಿವಾರ ಬೆಳಗ್ಗೆ 10.25 ರ ವೇಳೆ ಮಗು ಸಾವಿಗೀಡಾಗಿದೆ.

ತನ್ನ ಪತಿಯ ನಿರ್ಲಕ್ಷ್ಯದಿಂದಲೇ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಸಾವಿಗೀಡಾಗಿದೆ. ಮನೆಯೊಳಗೆ ಬೀಡಿ ಸೇದಿ ಎಸೆಯದಂತೆ ಹಲವು ಬಾರಿ ಗಂಡನಿಗೆ ತಿಳಿಸದ್ದರೂ, ನಿರ್ಲಕ್ಷ್ಯ ಮಾಡಿದ ಪರಿಣಾಮ ಮಗುವಿನ ಪ್ರಾಣ ಹೋಗಿದೆʼ ಎಂದು ತಾಯಿ ದೂರಿನಲ್ಲಿ ಆರೋಪ ಮಾಡಿರುವ ಕುರಿತು ವರದಿಯಾಗಿದೆ.

You may also like