D K Shivkumar : 28ಕ್ಕೆ ಏನೇ ಆದ್ರೂ ಕೂಡ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಾರ ಮಾಡೇ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ಏನೇ ಆದ್ರೂ 28 ಕ್ಕೆ ಪ್ರಮಾಣವಚನ ಮಾಡ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹಾಗಂತ ಇದು ಅವರ ಅಧಿಕಾರ ಸ್ವೀಕರಿಸ ಕುರಿತು ಮಾತನಾಡಿರುವುದಲ್ಲ. ಬದಲಿಗೆ 2028ಕ್ಕೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವೇ ಪ್ರಮಾಣವಚನ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು 2028 ಎಂದು ಹೇಳದೆ ಬರಿ 28ಕ್ಕೆ ಎಂದು ಹೇಳಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
ಅಂದಹಾಗೆ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಸಾಕಷ್ಟು ಕಡೆ ಕಾಲ್ತುಳಿತವಾದ ಉದಾಹರಣೆಯಿದೆ. ಅದಕ್ಕೆಲ್ಲಾ ಅಲ್ಲಿನ ಸರ್ಕಾರವೇ ಹೊಣೆ ಎನ್ನಕ್ಕಾಗುತ್ತಾ? ಬಿಜೆಪಿ ನಾಯಕರಿಗೆ ನಮ್ಮನ್ನು ಕಂಡರೆ ಭಯ. ಆ ಭಯಕ್ಕೆ ಏನೇನೋ ಹೇಳ್ತಾರೆ ಎಂದ ಡಿಕೆಶಿ ಕೊನೆಗೆ ನಾಡಿದ್ದು 28 ಕ್ಕೆ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ನೀವೂ ಬನ್ನಿ ಎಂದು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಪತ್ರಕರ್ತರು ನೀವು ಸಿಎಂ ಆಗಿ ಪ್ರಮಾಣ ವಚನನಾ ಎಂದು ಕಾಲೆಳೆದಿದ್ದಾರೆ. ಇಲ್ಲ ಕಾಂಗ್ರೆಸ್ ಸರ್ಕಾರ ಎಂದು ಡಿಕೆಶಿ ಹೇಳಿದ್ದಾರೆ.
