Drug peddler Arrest: ಸಿಸಿಬಿ ಪೊಲೀಸರ ಕಾರ್ಯಚರಣೆಯಿಂದ ಬೆಂಗಳೂರಿನಲ್ಲಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ವಿದೇಶಿ ಪ್ರಜೆಯ ಬಂಧನವಾಘಿದೆ. ನೈಜೀರಿಯಾ ಮೂಲದ ಚಿಕುವುಮಾ ಬಂಧಿತ ಆರೋಪಿ. ಬಂಧಿತನಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದ್ದು, ಇದರ ಜೊತೆ MDMA, ಕ್ರಿಸ್ಟಲ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಈ ಪೆಡ್ಲರನ್ನು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿದೆ. ಆರೋಪಿಯನ್ನ ಬಂಧಿಸಿ ಸಿಸಿಬಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. 1.2 ಕೋಟಿ ಮೌಲ್ಯದ 600 ಗ್ರಾಂ MDMA , ತೂಕದ ಯಂತ್ರ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ.
2013 ರಿಂದಲು ಡ್ರಗ್ ಮಾಫಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ಈತ ವಿದೇಶದಿಂದ ಡ್ರಗ್ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಹೊರವಲಯದಲ್ಲಿ ಹೆಚ್ಚಾಗಿ ಈತ ಮಾರಾಟ ಮಾಡುತ್ತಿದ್ದ. ಆರೋಪಿ ಡ್ರಗ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಈತನನ್ನು ಖೆಡ್ಡಕ್ಕೆ ಕೆಡವಿದೆ.
