Viral Video : 56 ವರ್ಷಗಳ ನಂತರ ಕುಟುಂಬವೊಂದಕ್ಕೆ ಹೆಣ್ಣು ಮಗು ಜನಿಸಿದ್ದು, ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇದೀಗ ಕುಟುಂಬಸ್ಥರು ಅದ್ದೂರಿಯಾಗಿ ಆ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಈ ಸಂತಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.instagram.com/reel/DKwTUH4Bx8x/?igsh=NzQxa2h2NjBsOHVs
ಹೌದು, ದೆಹಲಿ ಮೂಲದ ಕುಟುಂಬದಲ್ಲಿ 56 ವರ್ಷಗಳಿಂದ ಹೆಣ್ಣು ಮಗುವಿನ ಜನನವಾಗಿರಲಿಲ್ಲ. ಮನೆಯ ಎಲ್ಲಾ ಮಕ್ಕಳಿಗೂ ಗಂಡು ಮಗವೇ ಜನನವಾಗಿತ್ತು. ಇತ್ತೀಚೆಗೆ ಕುಟುಂಬದ ಪುತ್ರನಿಗೆ ಹೆಣ್ಣು ಮಗುವಾಗಿದ್ದು, ಕಂದಮ್ಮನನ್ನು ಅದ್ಧೂರಿಯಾಗಿ ಮೆನೆಗೆ ಕರೆದುಕೊಂಡು ಬರಲಾಗಿದೆ. ಮಗುವನ್ನು ಕುಟುಂಬಸ್ಥರು ಸ್ವಾಗತಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. dr.chahatrawal ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ನವಜಾತ ಶಿಶುವನ್ನು ಸ್ವಾಗತಿಸಲು ಬೀದಿಯಲ್ಲಿ ಪಟಾಕಿಗಳನ್ನು ಸಿಡಿಸಿ ಹಬ್ಬದ ವಾತಾವರಣವನ್ನೇ ಅಲ್ಲಿ ಸೃಷ್ಟಿಸಿರುವುದು ಸೆರೆಯಾಗಿದೆ. ಇನ್ನು ಮನೆಯ ಪ್ರವೇಶದ್ವಾರದಲ್ಲಿ ಗುಲಾಬಿ ಬಣ್ಣದ ಬಲೂನ್ ಕಮಾನುಗಳು, ಹೂವಿನ ಹಾರಗಳು ಮತ್ತು ಹೂವಿನ ದಳಗಳಿಂದ ಅಲಂಕರಿಸಲಾಗಿತ್ತು. ಒಳಗೆ, ನೆಲದ ಮೇಲೆ ಬಣ್ಣ ಬಣ್ಣದ ಹೂವುಗಳ ದಳಗಳನ್ನು ಹಾಸಿ “ವೆಲ್‍ಕಂ ಬೇಬಿ” ಎಂಬ ಸಂದೇಶವನ್ನು ಬರೆಯಲಾಗಿತ್ತು.ಹಾಗೇ ಮಗುವಿನ ಪುಟ್ಟ ಪಾದಗಳನ್ನು ಕುಂಕುಮದ ನೀರಿನಲ್ಲಿ ನಿಧಾನವಾಗಿ ಅದ್ದಿ ಆ ಪಾದಗಳನ್ನು ಬಿಳಿ ಹಾಳೆಯ ಮೇಲೆ ಅಚ್ಚೊತ್ತಿದ್ದಾರೆ. ಇನ್ನು ಮನೆಯ ಪ್ರವೇಶದ್ವಾರದಲ್ಲಿ ಅಕ್ಕಿ ತುಂಬಿದ ಸಣ್ಣ ಕಲಶವನ್ನು ಇರಿಸಲಾಗಿತ್ತು. ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡ ತಂದೆ ನಿಧಾನವಾಗಿ ಅವಳ ಪಾದದಿಂದ ಅಕ್ಕಿದ ತುಂಬಿದ ಸೇರನ್ನು ದೂಡಿ ಆ ಮಗುವನ್ನು ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾನೆ.
‘ನಮ್ಮ ಕುಟುಂಬದಲ್ಲಿ 56 ವರ್ಷಗಳ ನಂತರ ಹೆಣ್ಣು ಮಗು ಜನಿಸಿದೆ ಅಂತ ವೀಡಿಯೊದ ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ. ಇದು ಮನಸ್ಸಿಗೆ ಮುದ ನೀಡುವ ದೃಶ್ಯ ಎಂಬುದರಲ್ಲಿ ಸಂದೇಹವಿಲ್ಲ ಎಂದು ನೋಡಗರು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಈ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಂಟು ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ.
