Harangi Dam: ಕೊಡಗಿನಲ್ಲಿ ವ್ಯಾಪಕ ಮಳೆ ಯಾಗುತ್ತಿರುವುದರಿಂದ, ನೀರಿನ ಒಳಹರಿವು ನಿರೀಕ್ಷೆಗೆ ಮೀರಿ ಹೆಚ್ಚಾಗಿದ್ದರಿಂದ ಅಣೆಕಟ್ಟೆಗೆ ಒಳಹರಿವು ಹೆಚ್ಚಳವಾಗಿದ್ದ ಪರಿಣಾಮ ಇಂದು ಮಧ್ಯಾಹ್ನ 18 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿಬಿಡಲಾಯಿತು. ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಖುದ್ದು ಹಾಜರಿದ್ದು ನೀರು ಸರಾಗವಾಗಿ ಹೊರಬಿಡುವ ಕಾರ್ಯದಲ್ಲಿ ತೊಡೆದುಕೊಂಡಿದ್ದರು. ಜಲಾಶಯದಿಂದ ನೀರು ಹೊರ ಬರುತ್ತಿರುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಅಸಂಖ್ಯೆ ಪ್ರವಾಸಿಗರು ಇದೀಗ ಹಾರಂಗಿಯತ್ತ ಮುಖ ಮಾಡಿದ್ದಾರೆ.
ಪ್ರವಾಸಿಗರಿಗೆ ಮತ್ತು ನದಿ ಪಾತ್ರದ ಜನರು ಮುನ್ನೆಚ್ಚರಿಕೆಯಿಂದ ಇರುವಂತೆ ಹಾರಂಗಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನಲೆ, ಜಲಾಶಯಕ್ಕೆ ಹರಿದು ಬರುತ್ತಿರುವ ಹಿನ್ನೆಲೆ ಒಳಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೋಮವಾರಪೇಟೆ, ಹಟ್ಟಿಹೊಳೆ,ಕೋಟೆ ಬೆಟ್ಟ, ಸೂರ್ಲಬಿ, ಮಾದಾಪುರ ಗರಂಗದೂರು,ನಾಕೂರು, ಹೇರೂರು, ಮುಂತಾದ ಪ್ರದೇಶಗಳಲ್ಲಿ ಹೆಚ್ಚು ಮಳೆ ಆದ ಕಾರಣ ಹಾರಂಗಿ ಜಲಾಶಯದ ನೀರಿನ ಮಟ್ಟ ಭರ್ತಿಯಾಗಿದೆ. ಈ ಹಿನ್ನಲೆ, ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಗೊಳಿಸಲಾಗಿದೆ.
