Home » Belagavi: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕನಿಗೆ ಕೊಳಕುಮಂಡಲ ಹಾವು ಕಡಿತ

Belagavi: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕನಿಗೆ ಕೊಳಕುಮಂಡಲ ಹಾವು ಕಡಿತ

0 comments

Snake Bite: ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವೊಂದು ಕಚ್ಚಿದ್ದು, ಹಾವನ್ನೇ ಹಿಡಿದು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿಯ ಬಿಮ್ಸ್‌ ನಲ್ಲಿ ಇಂದು (ಜೂನ್‌ 17) ನಡೆದಿದೆ.

ಯಲ್ಲಪ್ಪ ಎನ್ನುವವರಿಗೆ ಹಾವು ಕಚ್ಚಿದೆ. ಕೊಳಕು ಮಂಡಲ ಎಂಬ ವಿಷಕಾರಿ ಹಾವು ಕಚ್ಚಿದ್ದು, ಹಾವನ್ನು ಡಬ್ಬಿಯಲ್ಲಿ ಹಿಡಿದು ಸೀದಾ ಬಿಮ್ಸ್‌ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವನ್ನು ಹಿಡಿದುಕೊಂಡು ಬರುವ ವ್ಯಕ್ತಿಯನ್ನು ಕಂಡು ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳು ಬೆಚ್ಚಿ ಬಿದ್ದಿದ್ದಾರೆ.

ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

You may also like