Home » DCM D K Shivakumar: ಮೆಟ್ರೋ ನಿಲ್ದಾಣದಲ್ಲಿ ಅಮುಲ್‌ ಮಳಿಗೆ: ಡಿಸಿಎಂ ಶಿವಕುಮಾರ್‌ ಹೇಳಿದ್ದೇನು?

DCM D K Shivakumar: ಮೆಟ್ರೋ ನಿಲ್ದಾಣದಲ್ಲಿ ಅಮುಲ್‌ ಮಳಿಗೆ: ಡಿಸಿಎಂ ಶಿವಕುಮಾರ್‌ ಹೇಳಿದ್ದೇನು?

by Mallika
0 comments
DK Shivakumar

DCM D K Shivakumar: ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್‌ ಉತ್ಪನ್ನ ಮಾರಾಟ ಮಳಿಗೆ ತೆರೆಯಲು ಬಿಎಂಆರ್‌ಸಿಎಲ್‌ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಮೆಟ್ರೋದ ಕೇವಲ ಎರಡು ಮಳಿಗೆಗಳಲ್ಲಿ ಮಾತ್ರ ಅಮುಲ್‌ ಅವಕಾಶ ಕೇಳಿದೆ. ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ 8 ಮಳಿಗೆಗಳಿಗೆ ಕೆಎಂಎಫ್‌ ಟೆಂಡರ್‌ ಕರೆಯಲಾಗಿದೆ ಎಂದು ಅವರು ಹೇಳಿದರು. ಮೆಟ್ರೋದ ಎಂಟು ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ನಮ್ಮದೇ ರಾಜ್ಯದ ಕೆಎಂಎಫ್‌ಗೆ ಅನುಮತಿ ಕೊಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ಎರಡು ಮಳಿಗೆಗಳಿಗೆ ಮಾತ್ರ ಅಮುಲ್‌ಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

You may also like