Home » Sullia: ಸುಳ್ಯ: ಪಿಕಪ್ ವಾಹನಗಳ ನಡುವೆ ಅಪಘಾತ; 600 ಲೀ. ಹಾಲು ರಸ್ತೆ ಪಾಲು!

Sullia: ಸುಳ್ಯ: ಪಿಕಪ್ ವಾಹನಗಳ ನಡುವೆ ಅಪಘಾತ; 600 ಲೀ. ಹಾಲು ರಸ್ತೆ ಪಾಲು!

0 comments

Sullia: ಸುಳ್ಯದ ಬಾಳಿಲದಲ್ಲಿ ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಇನ್ನೊಂದು ಪಿಕಪ್ ವಾಹನ ಡಿಕ್ಕಿಯಾಗಿ 600 ಲೀಟ‌ರ್ ಹಾಲು ರಸ್ತೆ ಪಾಲಾದ ಘಟನೆ ನಡೆದಿದೆ.

ಪಿಕಪ್ ವಾಹನವು 4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟ‌ರ್ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ತೆಗೆದುಕೊಂಡು ಬೆಳ್ಳಾರೆ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿದೆ.

ಘಟನೆಯಲ್ಲಿ ಚಾಲಕ ಸಯ್ಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

You may also like