Home » BMRCL: ನಮ್ಮ ಮೆಟ್ರೋದಲ್ಲಿ ಅಮುಲ್‌ ಮಳಿಗೆಗಳು: ಬಿಎಂಆರ್‌ಸಿಎಲ್‌ ನೀಡಿದ ಸ್ಪಷ್ಟನೆ ಏನು?

BMRCL: ನಮ್ಮ ಮೆಟ್ರೋದಲ್ಲಿ ಅಮುಲ್‌ ಮಳಿಗೆಗಳು: ಬಿಎಂಆರ್‌ಸಿಎಲ್‌ ನೀಡಿದ ಸ್ಪಷ್ಟನೆ ಏನು?

by Mallika
0 comments

BMRCL: ನಮ್ಮ ಮೆಟ್ರೋದಲ್ಲಿ ಗುಜರಾತ್‌ ಕೋ-ಅಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಫೆಡರೇಷನ್‌ ಲಿ. ಜೊತೆ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಉಂಟಾದ ಭಾರೀ ವಿರೋಧಕ್ಕೆ ಇದೀಗ ಬಿಎಂಆರ್ಸಿಎಲ್‌ ಸ್ಪಷ್ಟನೆ ನೀಡಿದೆ.

ಎಂಟು ನಿಲ್ದಾಣಗಳಲ್ಲಿ ಅಮುಲ್‌ ಮತ್ತು ಎರಡು ನಿಲ್ದಾಣಗಳಲ್ಲಿ ಕೆಎಂಎಫ್‌ ಮಳಿಗೆ ತೆರೆಯಲು ಅನುಮತಿ ನೀಡಲಾಗಿರುವ ಗೊಂದಲಗಳಿಗೆ, ಬಿಎಂಆರ್‌ಸಿಎಲ್‌ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್‌ ಸ್ಪಷ್ಟನೆ ನೀಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳು ಟೆಂಡರ್ ಮೂಲಕ ಆಗಿದೆ. ಅಮುಲ್ ಟೆಂಡರ್​​ನಲ್ಲಿ ಭಾಗಿಯಾಗಿ 10 ಮಳಿಗೆಗಳನ್ನು ತೆಗೆದುಕೊಂಡಿದೆ. ಎಂ.ಜಿ.ರೋಡ್, ಮಹಾಲಕ್ಷ್ಮೀ ಲೇಔಟ್, ವಿಜಯನಗರದಲ್ಲಿ ನಂದಿನಿ ಮಳಿಗೆಗಳಿದ್ದವು. ಈಗ ವಿಜಯನಗರದಲ್ಲಿ ಮಾತ್ರ ಮಳಿಗೆ ಇದೆ, ಎರಡು ಕಡೆ ಕಾರಣಾಂತರದಿಂದ ತೆಗೆದಿದ್ದಾರೆ” ಎಂದು ತಿಳಿಸಿದರು.

“ಟೆಂಡರ್​​ನಲ್ಲಿ ಭಾಗಿಯಾಗಿದರೆ ನಂದಿನಿ ಮಳಿಗೆಗೂ ಅವಕಾಶ ಕೊಡುತ್ತೇವೆ. ನಮಗೆ ಯಾರು ಕೂಡ ಮುಖ್ಯ ಅಲ್ಲ. 10 ಮಳಿಗೆಗೆ ಪ್ರತಿ ತಿಂಗಳು 7 ಲಕ್ಷ ರೂಪಾಯಿಯಂತೆ 5 ವರ್ಷಕ್ಕೆ ಟೆಂಡರ್ ಆಗಿದೆ. ಇತ್ತೀಚಿಗೆ ನಾವು ಕರೆದಿರುವ ಟೆಂಡರ್​ನಲ್ಲಿ ಕೆಎಂಎಫ್​ ಭಾಗಿಯಾಗಿರಲಿಲ್ಲ” ಎಂದು ಹೇಳಿದರು.

ಈಗಾಗಲೇ ಅಮುಲ್‌ ಮಳಿಗೆಗಳು, ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯ್ಯಪ್ಪನಹಳ್ಳಿ, ಟ್ರಿನಿಟಿ, ಸರ್.‌ ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್‌, ನ್ಯಾಷನಲ್‌ ಕಾಲೇಜು, ಜಯನಗರ ಹಾಗೂ ಬನಶಂಕರಿ ನಿಲ್ದಾಣದಲ್ಲಿ ತೆರೆಯಲಿದೆ.

You may also like