Home » Supreme Court: ಇನ್ನು 2ನೇ ಮತ್ತು 4ನೇ ಶನಿವಾರ ಇಲ್ಲ ರಜೆ, ಎಲ್ಲಾ ದಿನವವೂ ಕಚೇರಿಗಳು ಕಾರ್ಯನಿರ್ವಹಿಸಬೇಕು – ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Supreme Court: ಇನ್ನು 2ನೇ ಮತ್ತು 4ನೇ ಶನಿವಾರ ಇಲ್ಲ ರಜೆ, ಎಲ್ಲಾ ದಿನವವೂ ಕಚೇರಿಗಳು ಕಾರ್ಯನಿರ್ವಹಿಸಬೇಕು – ಸುಪ್ರೀಂ ಕೋರ್ಟ್ ಮಹತ್ವದ ಆದೇಶ

by V R
0 comments

Supreme Court: 2 ಮತ್ತು 4ನೇ ಶನಿವಾರದ ರಜೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ನೀಡಿದ್ದು, ಈ ದಿನ ಉಪಚರಿಗಳು ಕಾರ್ಯನಿರ್ವಹಿಸಬೇಕೆಂದು ತಿಳಿಸಿದೆ. ಹಾಗಂತ ಇದು ಎಲ್ಲಾ ಕಚೇರಿಗಳು ಅಲ್ಲ, ಬದಲಿಗೆ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳು ಮಾತ್ರ. ಹೀಗಾಗಿ 2025 ಪ್ರಕಾರ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳು ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.

ಹೌದು, ಸುಪ್ರೀಂ ಕೋರ್ಟ್ ನಿಯಮಗಳ ಆದೇಶ II, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಈಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ.

ಹೀಗಾಗಿ ನ್ಯಾಯಾಲಯದ ಕಚೇರಿಯು ಇನ್ನು ಸಾಂಪ್ರದಾಯಿಕವಾಗಿ ರಜೆ ಇದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರ ತೆರೆದಿರುತ್ತದೆ. ಗೊತ್ತುಪಡಿಸಿದ ರಜಾದಿನಗಳು ಮತ್ತು ಭಾಗಶಃ ಕೆಲಸದ ದಿನಗಳನ್ನು ಹೊರತುಪಡಿಸಿ ಕಚೇರಿಗಳು ಎಲ್ಲ ದಿನ ಕಾರ್ಯನಿರ್ವಹಿಸಬೇಕು. ಶನಿವಾರ ಕಚೇರಿ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಇರುತ್ತದೆ ಮತ್ತು ತುರ್ತು ವಿಷಯಗಳನ್ನು ಮಧ್ಯಾಹ್ನ 12 ಗಂಟೆಯ ಮೊದಲು ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ:Rahul Gandhi : ರಾಹುಲ್ ಗಾಂಧಿಗೆ 54ನೇ ಹುಟ್ಟುಹಬ್ಬ – ಪ್ರಧಾನಿ ಮೋದಿ ವಿಶ್ ಮಾಡಿದ್ದು ಹೀಗೆ

You may also like