Air pollution: ದೆಹಲಿಯ ಹವಾಮಾನದಲ್ಲಿನ ಬದಲಾವಣೆಯಿಂದಾಗಿ, ಗಾಳಿಯ ಗುಣಮಟ್ಟ ಸುಧಾರಿಸಿದೆ. ದೆಹಲಿಯಲ್ಲಿ ಕಳೆದ 261 ದಿನಗಳಲ್ಲಿ ಬುಧವಾರ ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಬುಧವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 81 ಆಗಿದ್ದು, ಇದು ‘ತೃಪ್ತಿದಾಯಕ’ ವರ್ಗದಲ್ಲಿದೆ. ಸೆಪ್ಟೆಂಬರ್ 29, 2024ರಂದು, AQI 76 ದಾಖಲಾಗಿತ್ತು. CPCB ಪ್ರಕಾರ, 0-50ರ ನಡುವಿನ ವಾಯು ಗುಣಮಟ್ಟ ‘ಉತ್ತಮ’, 51-100 ‘ತೃಪ್ತಿದಾಯಕ’, 101-200 ”, 201-300 ‘ಮಧ್ಯಮ’, 301-400 ‘ ಕಳಪೆ’, 401-500 ‘ಗಂಭೀರ’ ಎಂದು ಪರಿಗಣಿತವಾಗಿದೆ.
ಬುಧವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಸಾಮಾನ್ಯಕ್ಕಿಂತ 2.6 ಡಿಗ್ರಿ ಕಡಿಮೆಯಾಗಿದೆ. ದೆಹಲಿಯಲ್ಲಿ ಸಾಪೇಕ್ಷ ಆರ್ದ್ರತೆಯು ಸಂಜೆ 5.30 ರ ವೇಳೆಗೆ ಶೇ. 94 ರಷ್ಟು ದಾಖಲಾಗಿದೆ.
ಜೂನ್ 19ಕ್ಕೆ ದೆಹಲಿಯಲ್ಲಿ ಯಲ್ಲೋ ಅಲರ್ಟ್
ಐಎಂಡಿ ಪ್ರಕಾರ, ಜೂನ್ 18 ರಿಂದ ಜೂನ್ 24 ರವರೆಗೆ ಈ ಪ್ರದೇಶದಲ್ಲಿ ನಿರಂತರ ಮೋಡ ಕವಿದ ವಾತಾವರಣದೊಂದಿಗೆ ಹಗುರದಿಂದ ಮಧ್ಯಮ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಜೂನ್ 18 ರಂದು ಆರೆಂಜ್ ಎಚ್ಚರಿಕೆಯನ್ನು ನೀಡಿತ್ತು, ಆದರೆ ಹಳದಿ ಎಚ್ಚರಿಕೆ ಜೂನ್ 19 ರಂದು ಮುಂದುವರಿಯುತ್ತದೆ.
ಜೂನ್ 18ಕ್ಕೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ನೀಡಿತ್ತು ಮತ್ತು ಬಲವಾದ ಗಾಳಿಯೊಂದಿಗೆ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿತ್ತು. ಅದೇ ರೀತಿ, ಜೂನ್ 19 ರಂದು ಗರಿಷ್ಠ ತಾಪಮಾನವು 34 ಡಿಗ್ರಿ ಮತ್ತು ಕನಿಷ್ಠ ತಾಪಮಾನವು 23 ಡಿಗ್ರಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ದಿನ ಸಂಜೆ ಕೂಡ ಹಗುರ ಮಳೆಯಾಗಬಹುದು.
