3
Supreme court: ಈಗಾಗಲೇ ತಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗೋದಿಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಸುಪ್ರೀಂ ಕೋರ್ಟ್, ಇದೀಗ ಕರ್ನಾಟಕದಲ್ಲಿ ಬಿಡುಗಡೆಗೆ ಈ ಚಿತ್ರದ ಕುರಿತಾಗಿ ಯಾರು ವಿರೋಧ ವ್ಯಕ್ತಪಡಿಸುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇನ್ನು ರಾಜ್ಯದಲ್ಲಿ ಸಿನಿಮಾ ಪ್ರದರ್ಶನವಾಗುವ ಥಿಯೇಟರ್ಗಳಿಗೆ ಭದ್ರತೆಯನ್ನು ನೀಡುತ್ತೇವೆ ಎಂದಿರುವ ರಾಜ್ಯ ಸರ್ಕಾರದ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿದ್ದು, ಒಬ್ಬರಾ ಹೇಳಿಕೆಯಿಂದ ಇನ್ನೊಬ್ಬರಿಗೆ ನೋವು ಉಂಟಾಗಿದೆ ಎಂದು ಸಿನಿಮಾವನ್ನು ತಡೆಹಿಡಿಯುವುದು ಬೇಡ ಎಂದು ಪೀಠ ಹೇಳಿದೆ.
ಸಿನಿಮಾವನ್ನು ಬಿಡುಗಡೆ ಮಾಡಲು ಅವಕಾಶ ಕೊಡದ ಕಾರಣ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಇದೀಗ ಸೂಚನೆ ನೀಡುವ ಮೂಲಕ ಈ ಕೇಸ್ ಗೆ ಸಂಬಂಧಪಟ್ಟ ಪಿ.ಐಎಲ್ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:Mangaluru: ಮಂಗಳೂರು: 56 ಪೊಲೀಸ್ ಸಿಬ್ಬಂದಿ ವರ್ಗಾವಣೆ ದಿಡೀರ್ ವರ್ಗಾವಣೆ!
